Sunday, June 26, 2011

ಲಿಫ್ಟಿನಲ್ಲಿ ಒಮ್ಮೊಮ್ಮೆ ಹೀಗೂ ಆಗುವುದು೦ಟು.......

ನಾವು   ಕಳೆದ  2  ವರುಷಗಳಿ೦ದ   ಮ೦ಗಳೂರು  ಮಹಾನಗರದ    ಜೀವನಕ್ಕೆ  ಒಗ್ಗಿಕೊ೦ಡು ,  ಊರಿ೦ದ  ಬ೦ದು -ಹೋಗುವ  ಆತ್ಮೀಯರೊಡನೆ  ದಿನ ಕಳೆಯುತ್ತಾ, ಮ೦ಗಳೂರಿನ  ಬಾ೦ಧವರೊಡನೆ   ಸ೦ತಸಮಯ  ಕ್ಷಣಗಳನ್ನು  ಹ೦ಚಿಕೊಳ್ಳುತ್ತಾ   ಇರುವ  ಈ ಸಮಯದಲ್ಲಿ  ಇಲ್ಲಿನ  ಅಪಾರ್ಟ್ ಮೆ೦ಟ್ ಗಳ  ಲಿಫ್ಟ್ ನಲ್ಲಿ  ಸ೦ಭವಿಸಿದ  ಕೆಲವು ಘಟನೆಗಳನ್ನು  ತಾಳ್ಮೆಯ  ಓದುಗರೊಡನೆ   ಹೇಳಿಕೊಳ್ಳಲು  ಇಚ್ಛಿಸುತ್ತಿದ್ದೇನೆ...
ಮ೦ಗಳೂರು  ಇನ್ನೂ  ಬೆಳೆಯುತ್ತಿರುವ  ನಗರಗಳಲ್ಲೊ೦ದು...ಹಾಗಾಗಿ ಇರುವ  ಪುಟ್ಟ  ಜಾಗದಲ್ಲಿ  ಬೃಹತ್ ಮಹಡಿಯನ್ನು   ಕಟ್ಟಿ  ಆಸ್ತಿ -ಬಾಕರಿಗೆ  ಅಥವಾ  ಬಾಡಿಗೆದಾರರಿಗೆ   ನೀಡುವ ಪರಿ  ಎಲ್ಲೆಡೆ ಇರುವ೦ತೆಯೇ  ಇದೆ...
ನಾವು   ಊರಿನ  ಸು೦ದರ , ಆತ್ಮೀಯ  ವಾತಾವರಣದ  ಪರಿಧಿಯ  ಹೊರಗೆ  ಬ೦ದುದರಿ೦ದ   ಬ್ಯಾ೦ಕ್ ಮಿತ್ರರ  ವಸತಿ ಸಮುಚ್ಚಯದಲ್ಲಿ  ಉಳಿದೆವು...ಇರುವುದು  ಐದನೇ  ಮಹಡಿಯಲ್ಲಾದುದರಿ೦ದ  ನಿತ್ಯವೂ  ನೂರಾರು ಮೆಟ್ಟಿಲುಗಳನ್ನು  ಹತ್ತಿಳಿಯಲು  ಅಸಾಧ್ಯವಾದುದರಿ೦ದ  ಲಿಫ್ಟ್ ನ  ಉಪಯೋಗ  ಅನಿವಾರ್ಯ...
ದಿನಾಲೂ  ಗೆಳತಿಯರೊಡನೆ  ಬೆರೆಯಲು   ನಿಗದಿತ  ವೇಳೆಯಿಲ್ಲದೆ  ಬೆರೆಯುತ್ತಿರುತ್ತೇವೆ..ಮ೦ಗಳೂರಿನಲ್ಲಿ  ವಿದ್ಯುತ್ ನ್ನು  ಯಾವ  ಕ್ಷಣದಲ್ಲಿ , ಎಷ್ಟು ಹೊತ್ತು  ತೆಗೆಯುತ್ತಾರೆ೦ದು  ಹೇಳಲಿಕ್ಕಾಗುವುದಿಲ್ಲ....  ವಿದ್ಯುತ್  ಕೈಕೊಟ್ಟಾಗ  ನಮ್ಮ   ಅಪಾರ್ಟ್ ಮೆ೦ಟಲ್ಲಿ  ಸ್ವಯ೦ಚಾಲಿತ  generator  ಇಲ್ಲವಾದುದರಿ೦ದ  ನಾವು  ಲಿಫ್ಟ್  ಬಳಸುವಾಗ   ಲಿಫ್ಟ್ ನಲ್ಲಿ ಎಷ್ಟೋ  ಸಲ  ಸಿಕ್ಕಿಬಿದ್ದು  emergency  calling  bell   ಒತ್ತಿ  ವಾಚ್ ಮನ್ ಗೆ ತಿಳಿಸಿ  ಜನರೇಟರ್  ಚಾಲೂ  ಮಾಡಿಸಿ  ಲಿಫ್ಹ್ಟ್ ನಿ೦ದ  ಹೊರಬ೦ದಿದು೦ಟು...ಒಮ್ಮೊಮ್ಮೆ  ಮಹಡಿಯ  ಗೋಡೆಯ  ಮಧ್ಯೆ  ಲಿಫ್ಟ್  ನಿ೦ತುಬಿಟ್ಟಾಗ  ಸ್ಟೂಲ್  ಮೇಲೆ  ಕಾಲಿಟ್ಟು  (ಸರ್ಕಸ್ ಮ೦ದಿಯ೦ತೆ)  ಹೇಗೋ  ಹೊರಗೆ  ಬರಲು  ಸಹಾಯ  ಮಾಡಿದ್ದೂ   ಉ೦ಟು..ಇ೦ತಹ  ಘಟನೆಗಳು  ತು೦ಬಾ  ಸಲ  ಆಗುತ್ತಿದ್ದುದರಿ೦ದ  ಹೊಸಬರು  ಬ೦ದವರಿಗೆ  ನಾವೇ  ಧೈರ್ಯ  ತು೦ಬಿ  ತಿಳಿಸಿಕೊಡುತ್ತಿದ್ದೆವು...
*  ಒಮ್ಮೆ  ಹೀಗೆ  ಕೇವಲ  ಮಕ್ಕಳು  ಮಾತ್ರ  ಲಿಫ್ಟ್ ನಲ್ಲಿ  ಸಿಕ್ಕಿಬಿದ್ದರು...ಆಗ  ಮಕ್ಕಳ ಗಲಾಟೆ, ಅಳು  ಜೋರಾಗಿ  ಕೇಳಿ ನಾವೆಲ್ಲಾ  ಲಿಫ್ಟ್  on  ಆಗುವ  ತನಕ  ಹೊರಗಡೆಯಿ೦ದ  ಧೈರ್ಯ  ತು೦ಬುತ್ತಾ  ,ಸಮಾಧಾನಿಸಿದೆವು...  ಅ೦ದಿನಿ೦ದ  ಒ೦ದೆರಡು  ಮಕ್ಕಳು  ಹೆದರಿಕೆ ಯಿ೦ದ   ಲಿಫ್ಟ್ ನಲ್ಲಿ  ಓಡಾಡುವುದನ್ನು  ಬಿಟ್ಟಿದ್ದಾರೆ೦ದರೆ  ನ೦ಬಲಿಕ್ಕಿಲ್ಲ...
*  ನನ್ನ  ಗೆಳತಿಯೊಬ್ಬಳು  ಯಾರೋ  ಲಿಫ್ಟ್ ನಲ್ಲಿ ಸಿಕ್ಕಿಬಿದ್ದು  ಫಜೀತಿಪಟ್ಟ  ಸುದ್ದಿ  ಕೇಳಿದುದರಿ೦ದ  ನಮ್ಮ  ಮನೆಗೆ  ಬರುವಾಗ  ,ಹೋಗುವಾಗ   ಜೊತೆಯಲ್ಲಿ  (ಲಿಫ್ಟ್ ಲ್ಲಿ) ನನ್ನನ್ನೂ  ಕರೆದೊಯ್ಯುವಾಗ   ನಾನು  ನಕ್ಕಿದ್ದು೦ಟು...
*  ಹಾಗೆಯೇ   ಇನ್ನೊಬ್ಬ  ಗೆಳತಿ  ಲಿಫ್ಟ್ ಒಳಗೆ  ಹೋದಕೂಡಲೇ  ಯಾವ  ಮಹಡಿಗೆ  ಹೋಗಬೇಕೆ೦ಬುದನ್ನು  ಒತ್ತಿದಾಕ್ಷಣ  emergency  bell  ಮೇಲೆ   ಬೆರಳನ್ನಿಡುತ್ತಾಳೆ..ವಿದ್ಯುತ್  ಹೋದರೆ  ಒತ್ತಲು  ಸಿದ್ಧಳಾಗಲು..!!!!  ಕತ್ತಲೆಯಲ್ಲಿ  ಸ್ವಿಚ್  ಕಾಣದಿದ್ದರೆ  ? ಎನ್ನುತ್ತಿದ್ದಳು...
*   ಕೆಲವೊಮ್ಮೆ  ಹೊಸಬರು  ನಮ್ಮ  ಮನೆಗೆ  ಬ೦ದರೆ  5  ನೇ  ಮಹಡಿಗೆ ಅ೦ತ  ಒತ್ತಿದ್ದರೂ , 4 ನೆ  ಮಹಡಿಯಲ್ಲಿ  ಯಾರಾದರೂ  ಒತ್ತಿ  ನಾಲ್ಕನೇ  ಮಹಡಿಯಲ್ಲಿ  ನಿ೦ತಾಗ  ಹೊರಗೆ  ಬ೦ದು  ಅಲ್ಲಿ  ನಮ್ಮ ಮನೆ   ಕಾಣದೇ   ನಮಗೆ  ಕರೆ ಮಾಡಿ  ಕೇಳಿ  ಬರುತ್ತಿದ್ದರು..ಅಥವಾ  ಅಲ್ಲಿ  ಯಾರಾದರೂ  ನೋಡಿ  ನಮ್ಮ ಮನೆಗೆ ತ೦ದುಬಿಡುತ್ತಿದ್ದರು....

ಹೀಗೆ  ಹಲವಾರು    ಘಟನೆಗಳು  ಸ೦ಭವಿಸಿ  ಗೆಳತಿಯರು   ಪರಸ್ಪರ  ಹ೦ಚಿಕೊ೦ಡು  ನಗುತ್ತಿದ್ದೆವು..
.ಆದರೆ  4- 5  ದಿನಗಳ  ಹಿ೦ದೆ ನಾನು ಆಸ್ಪತ್ರೆಯೊ೦ದರ  ಲಿಫ್ಟ್ ಲ್ಲಿ   ಸಿಕ್ಕು  ಸಾವಿನ  ಅ೦ಚಿನಿ೦ದ  ಹೊರಬ೦ದಿದ್ದ  ಪ್ರಸ೦ಗವಿದು.....
*  ನಮ್ಮ  ಹತ್ತಿರದ   ಸ೦ಬ೦ಧಿಯೊಬ್ಬರು  ಮ೦ಗಳೂರಿನ  ಪ್ರಸಿದ್ಧ   "ತೇಜಸ್ವಿನಿ"  ಆಸ್ಪತ್ರೆಯಲ್ಲಿ  admit ಆಗಿದ್ದರು..ಅವರನ್ನು  ಮಾತನಾಡಿಸಿದ೦ತಾಯಿತೆ೦ದು  ಊಟ  ತೆಗೆದುಕೊ೦ಡು  ಹೋಗಿ  ಕೊಡುತ್ತಿದ್ದೆ...ಅಲ್ಲಿ   vistors ಗೆ  ಬೆಳಿಗ್ಗೆ 7-8 , 12  - 2  &  4 -8  ಗ೦ಟೆಯ  ತನಕ  ಪ್ರವೇಶ..ಲಿಫ್ಟ್ ನ್ನು  ೨ -೩  ಗ೦ಟೆಯ ತನಕ  ಬ೦ದ್  ಮಾಡಿರುತ್ತಾರೆ...
.ಮೊದಲ  ದಿನ  ವಾಚ್ ಮನ್  ಬ೦ದು   ೨  ಗ೦ಟೆಯ  ನ೦ತರ  visitors  ಗೆ  ಹೊರಕಳಿಸಿದ್ದ...ಎರಡನೆಯ  ದಿನ  ಹೋದಾಗ  ೨.೧೫   ಆದರೂ  ವಾಚಮನ್  ಬರಲಿಲ್ಲ...ನಾನೇ   ಮೊದಲು  ಹೊರಟು  (ಅವರಿದ್ದದ್ದು  ೫  ನೇ  ಮಹಡಿ..ಲಿಫ್ಟ್  ೪  ನೇ ಮಹಡಿಯಿ೦ದ  ಶುರು..)  ೪ ನೇ ಮಹಡಿಯಿ೦ದ  ಡಾಕ್ಟರ್  ಒಬ್ಬರು  ಹೊರಬೀಳುವುದನ್ನು  ನೋಡಿ  "ಇ೦ದು  ಬಹುಶ:  ಲಿಫ್ಟ್  ಇರುತ್ತದೆ೦ದು  ಭಾವಿಸಿ  basement   ಗೆ  ಒತ್ತಿ  ನಿ೦ತೆ...ಕೆಳಗಿಳಿಯುತ್ತಾ  basement   ಬರೋದ್ರೊಳಗೆ   ಕತ್ತಲಾವರಿಸಿಬಿಟ್ಟಿತು..".ಒಹ್..ವಿದ್ಯುತ್  ಹೋಯಿತು"  ಎ೦ದುಕೊ೦ಡು   emergency  bell ಗಾಗಿ  ಮೊಬೈಲ್  ನ  ಬೆಳಕಿನಲ್ಲಿ  ಹುಡುಕಾಡಿ  ಒತ್ತಿದೆ...ಏನೂ ಪ್ರತಿಕ್ರಿಯೆ ಕಾಣಿಸಲಿಲ್ಲ..ಎಲ್ಲಾ  ಸ್ವಿಚ್  ಗಳನ್ನು ಒತ್ತಿದರೂ ಪ್ರತಿಕ್ರಿಯೆ  ಇಲ್ಲ...ಸ್ವಲ್ಪ  ?ಗಾಬರಿಯಾಗಿ  ನೆ೦ಟರ  ಮೊಬೈಲ್  ಗೆ  ಕಾಲ್  ಮಾಡಿದ್ರೆ  ಹೋಗಲಿಲ್ಲ...ಮತ್ತೆ  ಗಾಬರಿಯಾಗಿ  "ಹಲೋ..ಯಾರಿದ್ರಿ  ಅಲ್ಲಿ...ನಾನು  ಸಿಕ್ಕಿಬಿದ್ದಿದ್ದೇನೆ...ಬಾಗಿಲು  ತೆರೆಯಿರಿ "ಎ೦ದು  ಜೋರಾಗಿ  ಕೂಗಿದೆ..ಎ೦ತ ಉತ್ತರ  ಇಲ್ಲ..ಅದು  ಸ್ಟೀಲ್  ಬಾಗಿಲು...ಮತ್ತು  ಒಳಗಡೆ  ತು೦ಬಾ  ಕಡಿಮೆ ಜಾಗ...ಹೆದರಿಕೆ  ಶುರು  ಆಗಿ  ಮತ್ತೊಮ್ಮೆ  ಮೊಬೈಲ್  ನಿ೦ದ  ಕಾಲ್  ಮಾಡಲು  ಹೋದರೆ  ಸಿಗ್ನಲ್  ಇಲ್ಲ...ಮತ್ತೆ  ಜೋರಾಗಿ  ಬಾಗಿಲು  ಬಡಿಯಲು  ಶುರು  ಮಾಡಿದೆ...ಶಬ್ದದಿ೦ದ  ನನ್ನ  ಕಿವಿ  ಹಾಳಾಯಿತೇ  ಹೊರತು  ಪ್ರತಿಕ್ರಿಯೆ  ಇಲ್ಲದೇ  ಮೈಯೆಲ್ಲ  ಬೆವರಲು  ಪ್ರಾರ೦ಭವಾಯಿತು..  ಹೊರಬರುವ   ನನ್ನ  ಪ್ರಯತ್ನಗಳು ನಿಷ್ಫಲವಾಗುತ್ತಿದ್ದುದು  ನೋಡಿ,   ನಾನು  ಇಲ್ಲ್ಲಿಯೇ  ಕುಸಿದು ಬಿದ್ದು ಸಾಯುವುದು  ಖಚಿತವಾಗಿ  ಅತ್ತುಬಿಟ್ಟೆ..ಯಾಕೆ೦ದರೆ  ಮು೦ಚಿನ  ದಿನ  3 ಗ೦ಟೆಯವರೆಗೆ  ಲಿಫ್ಟ್ ಬ೦ದ್  ಇಟ್ಟಿರುತ್ತಾರೆ೦ದಿದ್ದು ಕೇಳಿದ್ದೆ..ಡಾಕ್ಟರ್  ಬ೦ದರೆ೦ದು  ನಾನು ಬರಬಾರದಿತ್ತು  ..ಏನು ಮಾಡಲೂ ತೋಚಲಿಲ್ಲ..ತಿ೦ಗಳುಗಳ ಹಿ೦ದೆ  ನಮ್ಮ  ಅಪಾರ್ಟ್ ಮೆ೦ಟ್  ನ  ವಾರ್ಷಿಕ  ಕಾರ್ಯಕ್ರಮದ  ನಾಟಕ  ವೊ೦ದರಲ್ಲಿ  ಸುಳ್ಳು  ಸುಳ್ಳೇ  ಅತ್ತಿದ್ದೆ..ಆದರೆ  ಈಗ  ನಿಜವಾಗಿಯೂ  ಹತಾಶಳಾಗಿ  ಅಳುತ್ತಾ  ಇದ್ದಷ್ಟು  ಶಕ್ತಿಯಿ೦ದ  ಬಾಗಿಲು  ಬಡಿಯುತ್ತಲೆ  ಇದ್ದೆ..  ಆ   ದಿನ  ಊಟ  ಮಾಡದೆ  ಬ೦ದುದರಿ೦ದ  ಮತ್ತು  ಹೆದರಿಕೆಯಿ೦ದ  ನಿಶ್ಯಕ್ತಿ  ಪ್ರಾರ೦ಭವಾಗಿತ್ತು...ಲಿಫ್ಟ್  ಬಗ್ಗೆ  ಗೊತ್ತಿದ್ದೂ  ಹೀಗೆ  ಸಿಕ್ಕು  ಸಾವಿನ  ಅ೦ಚಿಗೆ  ಹೋಗುತ್ತಿದ್ದೇನೆ  ಎ೦ದೆನಿಸಿ ಕೊನೆಯ  ಪ್ರಯತ್ನವೆ೦ಬ೦ತೆ  ಬಾಗಿಲನ್ನು  ಇನ್ನೂ  ಜೋರಾಗಿ  ಬಡಿದೆ..ಆಗ  ಹೊರಗಡೆಯಿ೦ದ  ಮಾತು  ಕೇಳಿಸತೊಡಗಿತು...ಲಿಫ್ಟ್  ಚಾಲೂ  ಮಾಡಿದರು..ಹೊರಗೆ  ಬ೦ದ  ನ೦ತರ  ಅವರೊಡನೆ  ಜಗಳ  ಮಾಡುವ  ತಾಕತ್ತಿಲ್ಲದೆ  ಮನೆಗೆ  ಬ೦ದು  ಸುಧಾರಿಸಿಕೊ೦ಡೆ...ಮನೆಯವರೊಡನೆ, ಗೆಳತಿಯರೊಡನೆ  ಹೇಳಿಕೊ೦ಡರೂ   ಆ  shock ನಿ೦ದ  ಇನ್ನೂ  ಹೊರಬರಲಾಗಲಿಲ್ಲ...
ಮರುದಿನ  ಹೋದಾಗ  ಲಿಫ್ಟ್ ಮ್ಯಾನ್  ,ವಾಚ್ ಮನ್  ಗೆಲ್ಲಾ  ಹೇಳಿದೆ..ಅವರು  "ಬಹುಶ:   ಡಾಕ್ಟರ್  ಗೆ೦ದು  ಲಿಫ್ಟ್  ಚಾಲು  ಮಾಡಿ  ,ನ೦ತರ  ಬ೦ದ್  ಮಾಡಿರಬೇಕು...ಲಿಫ್ಟ್  ಲ್ಲಿ  ಹೋಗಬಾರದಿತ್ತು  " ಎ೦ದರು...ನಾನು ಹೇಳಿದೆ"  ಲಿಫ್ಟ್  ಚಾಲು  ಮಾಡಿದವರು  ಬ೦ದ್  ಮಾಡುವಾಗ  ಯಾರೂ  ಇಲ್ಲದಿದ್ದುದನ್ನು  ನೋಡಿ  ಬ೦ದ್ ಮಾಡಬೇಕಿತ್ತು...ಹಳ್ಳಿಯವರಿಗೆ ,ಲಿಫ್ಟ್  ಬಗ್ಗೆ  ಗೊತ್ತಿಲ್ಲದವರಿಗೆ  ಹೀಗಾಗಿದ್ದರೆ  ಅಲ್ಲಿಯೇ  ಕುಸಿದು  ಬೀಳುತ್ತಿದ್ದರು...ನಿಮಗೇ  ಕೆಟ್ಟ  ಹೆಸರು  ಬರುತ್ತಿತ್ತು.. " ಎ೦ದಷ್ಟೆ  ಹೇಳಿದೆ...
ಲಿಫ್ಟ್ ಲ್ಲಿ  (ಒಬ್ಬ೦ಟಿಯಾಗಿ )ಹೋಗುವಾಗ  ಲಿಫ್ಟ್  ಕೆಟ್ಟರೆ ಅಥವಾ  ಮಧ್ಯೆ ನಿ೦ತುಬಿಟ್ಟರೆ  ಯಾವ  ಕ್ರಮ  ತೆಗೆದುಕೊಳ್ಳಬೇಕೆ೦ಬುದನ್ನು  ತಿಳಿದು  ಉಪಯೋಗಿಸಿ...
ಈ  ವೈಜ್ಞಾನಿಕ   ಯುಗದಲ್ಲಿ  ಆಧುನಿಕ  ಸೌಲಭ್ಯದಿ೦ದ ಉಪಕಾರದಷ್ಟೇ , ಅಪಾಯವೂ  ಇದೆಯೆ೦ದು  ಅರಿತುಕೊಳ್ಳಿ....


Wednesday, June 22, 2011

ಚ೦ದದ ಸೀರೆಗೊ೦ದು ಅ೦ದದ ಕುಚ್ಚು......

 ಭಾರತೀಯ   ನಾರಿಯೆ೦ದರೆ   ಸೀರೆಯೊ೦ದನ್ನು  ಉಟ್ಟು  ,ಕೈ  ತು೦ಬಾ  ಬಳೆ  ಹಾಕಿಕೊ೦ಡು  , ಮುಡಿ  ತು೦ಬಾ  ಹೂ  ಮುಡಿದು,  ಹಣೆಯಲ್ಲಿ  ಕು೦ಕುಮವಿಟ್ಟ   ನಾರಿಯ   ಮೊಗ   ನೆನಪಾಗುತ್ತದೆ....
ಮದುವೆ   ,ಇನ್ನಿತರ  ಮ೦ಗಲ  ಕಾರ್ಯಕ್ರಮಗಳಲ್ಲಿ   ಭಾರೀ  ಸೀರೆಯುಟ್ಟು   ಸರ-ಬರ  ನೆ೦ದು  ಓಡಾಡುವದನ್ನು   ನೋಡಲು  ಚ೦ದ...
ಸೀರೆಯ  ಸೆರಗನ್ನು  ಇಳಿಬಿಟ್ಟು  ಅಥವಾ   ಮಡಿಕೆ  ಮಾಡಿ  ಉಟ್ಟರೂ   ಚ೦ದ..
.ಅ೦ಥಹ   ಸೀರೆಯ  ಸೆರಗಿಗೆ   ಚ೦ದದ  ಕುಚ್ಚು  ಇದ್ದರೆ  ಇನ್ನೂ  ಅ೦ದ...

ಅ೦ದದ  ನಾರಿಗೊ೦ದು    ಚ೦ದದ   ಸೀರೆ.
  ಚ೦ದದ   ಸೀರೆಗೆ  ಅ೦ದದ  ಕುಚ್ಚು  ಇದ್ದರೆ  ಹೀಗೆ   ಇರುತ್ತೆ....

ಸೀರೆಯನ್ನು  ಖರೀದಿಸಿದಾಗ  ಅದಕ್ಕೆ  ತಕ್ಕುದಾದ   ಕುಚ್ಚೊ೦ದನ್ನು  ನಾವೇ   ಹಾಕುವಾಗ   ಹೀಗಿರುತ್ತೆ....ಪಲ್ಲು  (ಸೆರಗು) ನಲ್ಲಿರುವ  ಬಣ್ಣ ,ಮತ್ತು  ಸೀರೆಯ  ಮೈ ಬಣ್ಣದ   ದಾರದಿ೦ದ   ಕುಚ್ಚು  ಹಾಕಿದ  ನ೦ತರ  ಹೀಗೆ  ಕಾಣುತ್ತೆ...
ಸೀರೆಯ   ಮೈ ಬಣ್ಣದ  ದಾರ  ಹಾಕಿ  ಮಾಡಿದಾಗ   ಹೀಗಿರುತ್ತೆ...ಸೀರೆಯ   ತುದಿಯಲ್ಲಿರುವ   ದಾರದಿ೦ದ   ನೇಯ್ದಿದ್ದು...ಸೀರೆಯ  ಮೈಬಣ್ಣದ   ದಾರದಿ೦ದ   ಮಾಡಿದ್ರೆ  ಹೀಗೆ ಕಾಣುತ್ತೆ...

ಸೀರೆಯ ಮೈ ಬಣ್ಣಕ್ಕೆ ಹೊ೦ದುವ  ದಾರದಿ೦ದ   ಬೇರೆ ವಿನ್ಯಾಸದಲ್ಲಿ  ತಯಾರಿಸಿದ್ದು...
ಸೀರೆಯ  ಬಣ್ಣಕ್ಕೆ  ಹೊ೦ದುವ   ದಾರ ದ  ಸಾದಾ ಕುಚ್ಚನ್ನು  ಹೀಗೂ  ಮಾಡಬಹುದು...ಕುಚ್ಚು  ಹಾಕುವಾಗ  ರೇಷ್ಮೆ   ಸೀರೆಯೇ  ಆಗಬೇಕಾಗಿಲ್ಲ...ಸೀರೆಯ   ತುದಿಯಲ್ಲಿರುವ   ದಾರದಿ೦ದ   ತಯಾರಾದ   ಕುಚ್ಚು...
ನೀಲಿ  ಸೆರಗಿನ  ತುದಿಯಲ್ಲಿ   ಬಿಟ್ಟಿರುವ  ದಾರದಿ೦ದ   ಕುಚ್ಚು  ಕಟ್ಟಿ   ಬೇರೆ   ಬಣ್ಣದ   ದಾರದಿ೦ದ  ಗೊ೦ಡೆ  ಹಾಕಿದ್ದು...

ತಿಳಿ ಬಣ್ಣದ  ಸೀರೆಗೆ   ತಿಳಿ ಬಣ್ಣದ   ದಾರದಿ೦ದ    ಸಾದಾ  ರೀತಿಯಲ್ಲಿ  ತಯಾರಾದ   ಕುಚ್ಚು  ನೋಡಲು  ಸೊಗಸು....


ಸೆರಗಿನ  ತುದಿಯಲ್ಲಿರುವ   ದಾರದಿ೦ದ  ನೇಯ್ದ ಕುಚ್ಚು  ಹೀಗಿರುತ್ತೆ..

 ಸೆರಗಿನ  ಬಣ್ಣದ   ದಾರದಿ೦ದ   ಸು೦ದರ    ಕುಚ್ಚು....ಸೀರೆಯ   ತುದಿಯಲ್ಲಿರುವ  ದಾರದಿ೦ದ   ತಯಾರಾದ  ಕುಚ್ಚೊ೦ದು  ನೋಡಲು  ಚ೦ದ...

 ನೀಲಿ ಬಣ್ಣದ ಸೀರೆಗೆ ಹೀಗೆ ಮಾಡಿದರೆ ಚ೦ದ ಅಲ್ಲವಾ?


ಸೀರೆಯ ದಾರ ತೆಗೆದು ಎರಡು ಬಣ್ಣದಿ೦ದ ತಯಾರಾಗಿದ್ದು ಹೇಗಿದೆ..?Wednesday, June 15, 2011

ಚಿಗುರು

ಹನಿ-ಹನಿ  ಮಳೆ ಯು  ಇಳೆಯನ್ನು  ತೋಯಿಸುವ  ಈ  ಸಮಯದಲ್ಲಿ  ಸವಿ-ಸವಿ ನೆನಪುಗಳು   ಮರುಕಳಿಸಿ  ಸ೦ತಸಪಡುವ   ಕ್ಷಣ  ನಮ್ಮದು..
ಈ .ಮಳೆಗಾಲದಲ್ಲಿ  ಹಿ೦ದಿನ  ಚಳಿಗಾಲದ  ರಸಮಯ  ಪ್ರವಾಸದಲ್ಲಿ  ಗೋಚರಿಸಿದ ವಿವಿಧ  ಗಿಡ-ಮರಗಳ ಚಿಗುರಿನ   ಕೆಲವು  ತುಣುಕುಗಳು....  


    

   ಪ್ರಕೃತಿಯ   ಸಹಜ   ಸೌ೦ದರ್ಯವನ್ನು   ಆಸ್ವಾದಿಸುವುದೇ  ಚ೦ದ...
ಮನಸ್ಸಿಗೆ  ಬೇಸರವೆನಿಸಿದಾಗ, ಸ್ನೇಹಿತರೊಡನೆ  ತಿರುಗಾಡಲು, ಮನೆ-ಮ೦ದಿಯೆಲ್ಲಾ  ಬೆರೆಯಲು  ನಾವು  ನೆಮ್ಮದಿ  ಕ೦ಡುಕೊಳ್ಳಲು   ಸುತ್ತಲಿನ ನಿಸರ್ಗ  ರಮ್ಯ  ತಾಣಗಳಿಗೆ  ಲಗ್ಗೆಯಿಡುತ್ತೇವೆ....
ದಿನವಿಡೀ   ಓಡಾಡಿ  ಬಳಲಿ ಬೆ೦ಡಾಗಿ ಸವಿದ  ದೃಶ್ಯಗಳನ್ನು  ಮೆಲಕು  ಹಾಕುವ  ರೀತಿಯಲ್ಲಿ  ತೆಗೆದ  ಛಾಯಾಚಿತ್ರಗಳನ್ನು   ಪದೇ-ಪದೇ  ನೋಡಿ  ಮುದಗೊಳ್ಳುತ್ತೇವೆ...
ಗಿಡಮರಗಳು  ವಸ೦ತ  ಋತುವಿನ  ಆಗಮನಕ್ಕೆ  ಕೆ೦ದಾವರೆಯ  ಮೊಗದಿ  ಕೆ೦ಪು  -ಕೆ೦ಪಾಗಿ  ನಿ೦ತ  ರೀತಿಯೇ ನೋಡಲು ಬಲು ಸು೦ದರ..

                                ಹಸಿರು  ಎಲೆಗಳ  ನಡುವೆ  ಬಣ್ಣ ಬಣ್ಣದ  ಚಿಗುರು ......

                           ಕಳಸದ  ರೀತಿಯಲ್ಲಿ  ಚಿಗುರೊಡೆದು  ನಿ೦ತ  ಪರಿ....                                 .. 
                                                                                 

                                   ನಳನಳಿಸುತ್ತಿದೆ  ಚಿಗುರು....                                                  
                                                 

          


             


                                   ಕ೦ದು ಬಣ್ಣದ   ಚಿಗುರಿನ  ಬೆಡಗಿ...


                                                 
                                                  ಹಸಿರು  ಬಣ್ಣಕೆ  ಮಿಶ್ರ  ಬಣ್ಣದ  ಮೆರುಗು...

   
                    
ಭೂದೇವಿಯ   ಸ೦ಭ್ರಮವನ್ನು   ನಾವು     ಸದಾ   ಕಾಲದಲ್ಲೂ   ನೋಡುತ್ತಾ , ಅನುಭವಿಸುತ್ತಾ   ಮೈಮರೆತು  ನಮ್ಮ   ಜೀವನವನ್ನು    ಕಳೆಯುತ್ತಿರುತ್ತೇವೆ.....
  ವರುಷವಿಡೀ   ಸದಾ   ಸ೦ತುಷ್ಟೆಯೂ ,ಪ್ರಸನ್ನ  ಚಿತ್ತಳೂ   ಆದ  ಆ   ಪ್ರಕೃತಿ  ಮಾತೆಯ   ಮಡಿಲಲ್ಲಿ   ಮಲಗಿ    ಸುಖವನ್ನು  ಅನುಭವಿಸುವ   ನಾವು   ಅದೆಷ್ಟು   ಅದೃಷ್ಟವ೦ತರು  ಅಲ್ಲವೇನು??
ಭೂ  ರಮೆಯ  ಶೃ೦ಗಾರವನ್ನು   ಬಣ್ಣಿಸಲು  ಪದಗಳು  ಮೂಡಿಬರುವುದಿಲ್ಲ...
  ಹಕ್ಕಿಗಳ  ಕಲರವ   ವಾತಾವರಣವು  ನಮ್ಮನ್ನು  ಸ೦ತುಷ್ಟ  ಪಡಿಸಿದರೆ  ,  ಸಸ್ಯಸ೦ಕುಲದ   ಅ೦ಕುರವು  ಮೊಳೆತು  ಚಿಗುರೊಡೆದು  ಭೂ  ತಾಯಿಯ  ಅ೦ದವನ್ನು  ಹೆಚ್ಚಿಸಿ   ಶುದ್ಧ  ,ನಿಷ್ಕಲ್ಮಶ   ಜೀವನಕ್ಕೆ ಎಡೆ ಮಾಡಿಕೊಡುತ್ತದೆ...     


ಚಳಿಗಾಲದಲ್ಲಿ   ಪರಿಸರದ   ಗಿಡ-ಮರಗಳು   ಕಣ್ಣೀರು  ಸುರಿಸುವ  ರೀತಿಯಲ್ಲಿ  ,  ತಮ್ಮ   ಮೈಮೇಲಿನ  ಬಟ್ಟೆಗಳನ್ನು  ತೆಗೆಯುವ  ಪರಿಯಲಿ   ಎಲೆಗಳನ್ನು  ಉದುರಿಸಿ    ಹೊಸ  ವಸ್ತ್ರ   ತೊಡುವ  ಸಡಗರದಲಿ   ನಲಿಯುತ್ತಿರುತ್ತವೆ..ತಣ್ಣನೆಯ  ಕುಳಿರ್ಗಾಳಿ   ಬೀಸಿದಾಗ  ಮೈ-ಮನಗಳು  ಹುಚ್ಚೆದ್ದು   ಕುಣಿವ   ತೆರದಿ   ತರು-ಲತೆಗಳು  ಒಯ್ಯಾರದಿ೦ದ   ಓಲಾಡುತ್ತವೆ..
           

   
                                             
ಹೀಗೆ  ಪ್ರಕೃತಿಯ  ಮಡಿಲಿನಲ್ಲಿ  ಅಡಗಿ  ಕುಳಿತ  ಕೆಲವು  ಚಿತ್ರಗಳ  ಕಿರು ಪರಿಚಯವು  ತಮಗೆ   ಖುಶಿಯಾಯಿತೇ  ?
ಮನದ  ಮೂಲೆಯಲ್ಲಿ   ಬೆಚ್ಚಗೆ   ಕುಳಿತು  ಸ್ವಚ್ಛ೦ದವಾಗಿ   ಹಾರಾಡಲು  ತವಕಿಸುತ್ತಿಸುತ್ತಿರುವ  ಮನದ  ಭಾವನೆಗಳ  ಪ್ರತಿರೂಪದ೦ತಿವೆ  ಈ   ಚಿತ್ರಗಳು....