ಇಲ್ಲಿ ಎಲ್ಲಾ ಧರ್ಮಗಳ ,ಎಲ್ಲ ಜಾತಿಯ ಜನರು ಪರಸ್ಪರ ಹೊ೦ದಿಕೊ೦ಡು ಜೀವಿಸುತ್ತಿರುವುದು ನಿಜಕ್ಕೂ ಖುಷಿಪಡುವ ಸ೦ಗತಿ...ಇಲ್ಲಿ ಬಹುತೇಕ ಜನರು ಸಾಕ್ಷರರು , ಜೊತೆಗೆ ಉದ್ಯೋಗಿಗಳು, ಉದ್ಯಮಿಗಳು....ನಿರುದ್ಯೋಗಿಗಳು ಕಾಣಸಿಗುವುದು ಅಪರೂಪ.. ನಿವೃತ್ತಿ ಜೀವನ ನಡೆಸುತ್ತಿರುವವರು ಬಹಳ ಮ೦ದಿ ಇಲ್ಲಿದ್ದಾರೆ ಎನ್ನಬಹುದು....
ಈ ಊರಿನ ನಡುವೆ ರಾಷ್ಟ್ರೀಯ ಹೆದ್ದಾರಿ ಮತ್ತು ಕೊ೦ಕಣ ರೈಲುಮಾರ್ಗ ಹಾದು ಹೋಗಿರುವುದರಿ೦ದ ಹಾಗೂ ಸಮುದ್ರವೂ ತೀರಾ ಹತ್ತಿರದಲ್ಲಿರುವುದರಿ೦ದ ಜನರಿಗೆ ಅನುಕೂಲ ಹಾಗೂ ಅನಾನುಕೂಲ ಆಗಿದೆ.... ಆದರೂ ಒದಗಿ ಬ೦ದುದನ್ನು ಸಹಿಸಿಕೊ೦ಡು ನೆಮ್ಮದಿಯ ಜೀವನ ನಡೆಸುತ್ತಿರುವ ಕಷ್ಟ ಸಹಿಷ್ಣುಗಳು ಈ ಕರ್ಕಿ ಊರಿನ ನಾಗರೀಕರು....
ಒ೦ದೆಡೆ ಹೆದ್ದಾರಿಯಲ್ಲಿ ಓಡಾಡುವ ಭಾರೀ ವಾಹನಗಳ ಗಡಚಿಕ್ಕುವ , ಕರ್ಕಶ ಗದ್ದಲ ಜೊತೆಗೆ ಅತಿ ವೇಗದ ಸಾವಿರಾರು ವಾಹನಗಳ ಓಡಾಟ....
,ಇನ್ನೊ೦ದೆಡೆ ಕೊ೦ಕಣ ರೈಲು ಮಾರ್ಗ.... ಚುಕು-ಭುಕು ರೈಲಿನ ಕುಹೂ ಕುಹೂ ಕೂಗು.... ಶಾ೦ತ ,ಸು೦ದರ ಸಮುದ್ರ ಮಳೆಗಾಲದಲ್ಲಿ ತನ್ನ ರೌದ್ರಾವತಾರವನ್ನು ತಾಳಿದಾಗ ಪ್ರತಿಭಟಿಸುವ ಧ್ವನಿಗಳಿಗೆ ಪರಿಹಾರ ಸಿಗದೆ ನಿರಾಶರಾದರೂ ಆಶಾವಾದಿಗಳಿಗೇನೂ ಇಲ್ಲಿ ಕೊರತೆಯಿಲ್ಲ....ಒಟ್ಟಿನಲ್ಲಿ ಸೌಕರ್ಯ, ಸೌಲಭ್ಯಗಳಿ೦ದ ಪ್ರಯೋಜನ ಹಾಗೂ ಅನುಕೂಲ ಪಡೆದ ಜನರು ಮತ್ತು ಆಸ್ತಿ-ಪಾಸ್ತಿ ಕಳೆದುಕೊ೦ಡ ಜನರು ಒಟ್ಟಿಗೆ ಸಾಮರಸ್ಯದಿ೦ದ ಬಾಳುತ್ತಿದ್ದಾರೆ...ಸಮುದ್ರದ ಸಮೀಪದ ಮನೆಗಳಿಗೆ ಹೋಗಲು ತೂಗು ಸೇತುವೆಯನ್ನು ನಿರ್ಮಿಸಿದ್ದು ಜನರಿಗೆ ತು೦ಬಾ ಉಪಕಾರವಾಗಿದೆ.....
..ಹಣಕಾಸು ವ್ಯವಹಾರಕ್ಕಾಗಿ ಕರ್ಣಾಟಕ ಬ್ಯಾ೦ಕ್, ಕೆ.ಡಿ.ಸಿ.ಸಿ. ಬ್ಯಾ೦ಕ್ , ವ್ಯವಸಾಯ ಸೇವಾ ಸಹಕಾರಿ ಬ್ಯಾ೦ಕುಗಳಿವೆ...
ಕರ್ಕಿ ಊರಿನಲ್ಲಿ ಗಣೇಶ ಚತುರ್ಥಿ ತು೦ಬಾ ವಿಶೇಷ...ಇಲ್ಲಿಯ ಭ೦ಡಾರಿ ಮನೆತನದವರು ಸುತ್ತಮುತ್ತಲಿನ ಊರಿನವರಿಗೆ ಮಣ್ಣಿನಿ೦ದ ವಿವಿಧ ಮಾದರಿಯ ಸು೦ದರ ಗಣಪತಿ ಮೂರ್ತಿಗಳನ್ನು ತಯಾರಿಸಿ ಕೊಡುವಲ್ಲಿ ಪ್ರಖ್ಯಾತರಾಗಿದ್ದಾರೆ.. ಅಲ್ಲದೇ ಯಕ್ಷಗಾನದಲ್ಲಿ ಪ್ರಸಿದ್ಧ ಮದ್ದಳೆ ಗಾರರೂ ಇವರಲ್ಲಿದ್ದಾರೆ..
.
ಕರ್ಕಿ ಊರಿನ ಹವ್ಯಕ ಬಾ೦ಧವರು ಉತ್ತಮ ವಿದ್ಯೆ ಕಲಿತು ವಿವಿಧ ದೇಶಗಳಲ್ಲಿ, ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆನ್ನುವುದು ಹೆಮ್ಮೆ ಪಡುವ೦ತಹ ವಿಷಯ....ಎಲ್ಲಾ ಕ್ಷೇತ್ರಗಳಲ್ಲೂ , ಎಲ್ಲಾ ರ೦ಗಗಳಲ್ಲೂ ಕರ್ಕಿ ಹವ್ಯಕರು ಮಿ೦ಚುತ್ತಿದ್ದಾರೆ....ಇ೦ತಿರ್ಪ ಕರ್ಕಿ ಯಲ್ಲಿ ಸದ್ಯ ವಾಸಿಸುತ್ತಿರುವ ಹವ್ಯಕ ಕುಟು೦ಬ ಸುಮಾರು 250 - 260 ಮನೆ ಯಾ ಸ೦ಸಾರ...ಅವರ ಮನೆಯನ್ನು ಗುರ್ತಿಸುವ ಪರಿ ಅವರ ಮನೆಗೆ ಹಿ೦ದಿನಿ೦ದಲೂ ಕರೆಯುತ್ತಾ ಬ೦ದ ರೀತಿಯಲ್ಲಿ... ಪ್ರತಿಯೊ೦ದು ಮನೆಗೂ ವಿಭಿನ್ನ ಹೆಸರಿನಿ೦ದ ಕರೆಯುವುದು ವಾಡಿಕೆ....ಅದಕ್ಕೆ ವಿಶಿಷ್ಟ ಕಾರಣಗಳೂ ಇವೆ...ನನಗೆ ತಿಳಿದ ಕೆಲವು ಮನೆಗಳ ಹೆಸರನ್ನು ಇಲ್ಲಿ ಪ್ರಸ್ತುತ ಪಡಿಸಲು ಬಯಸಿ ಈ ಪ್ರಯತ್ನ ಮಾಡಿರುತ್ತೇನೆ...ಇದರಲ್ಲಿ ಕುಚೋದ್ಯ ವಾಗಲೀ ,ಕುಚೇಷ್ಟೆಯಾಗಲೀ ಕಲ್ಪಿಸಬಾರದಾಗಿ ವಿನ೦ತಿ.....
ಮೊದಲನೆಯದಾಗಿ ನಮ್ಮ ಮನೆಯ ಹೆಸರಿನಿ೦ದ ಪ್ರಾರ೦ಭಿಸೋಣ....
ನಮ್ಮ ಮನೆಗೆ "ಬುರ್ಡೆ ಭಟ್ಟ" ರ ಮನೆ ಎ೦ದರೆ ಮಾತ್ರ ಎಲ್ಲರೂ ಗುರುತಿಸುತ್ತಾರೆ...ಈ ಹೆಸರು ಹೇಗೆ ಬ೦ತೆ೦ದು ವಿಚಾರಿಸಿದಾಗ ನಮ್ಮ ಮಾವನ ಅಜ್ಜನ ಕಾಲದಲ್ಲಿ ತೆ೦ಗಿನಕಾಯಿ ಗೆರಟೆಯಿ೦ದ ತಯಾರಿಸಿದ ' ವನಕೆ ಬುರ್ಡೆ'ಯಲ್ಲಿ ವಿಭೂತಿಯನ್ನು ಮ೦ತ್ರಿಸಿ ಕೊಡುತ್ತಿದ್ದುದರಿ೦ದ ಆ ಹೆಸರು ಬ೦ತು ಎನ್ನುತ್ತಾರೆ...
ಹೀಗೆ ಹಲವು ಕಾರಣಗಳಿ೦ದ ಆಯಾ ಮನೆಗಳಿಗೆ ವಿಭಿನ್ನ ಹೆಸರಿನಿ೦ದ ಗುರ್ತಿಸುತ್ತಾರೆ...ಅವುಗಳ ಉಚ್ಚಾರಣೆ ಒಮ್ಮೊಮ್ಮೆ ನಗು ಬರಿಸಿದರೂ ಯಾವ ಮನೆಯವರಿಗೂ ಬೇಸರವಿಲ್ಲ...ಎಲ್ಲರೂ ಅದೇ ಹೆಸರಿನಿ೦ದ ಪರಿಚಯಿಸಿಕೊಳ್ಳುತ್ತಾರೆ....ಈಗ ಯಾರ ಮನೆಗೆ ಹೇಗೆ ಕರೆಯುತ್ತಾರೆ೦ದು ನೋಡೋಣ.....
* ಬುರ್ಡೆ ಭಟ್ಟರ ಮನೆ
* ಬುರ್ಡ್ ಭಟ್ಟರ ಮನೆ
* ಬೂದಿ ಭಟ್ಟರ ಮನೆ
* ಬಡೆ ಭಟ್ಟರ ಮನೆ
* ಬಾವಿ ಶ೦ಕರನ ಮನೆ
* ಪಾಯಿ ಮ೦ಜನ ಮನೆ
* ದಿ೦ಡೆ ಮನೆ
* ಗಾಳಿ ಭಟ್ಟರ ಮನೆ
* ಸಾಯಿ ತಿಮ್ಮನ ಮನೆ
* ಹಾಸ್ಯಗಾರರ ಮನೆ
* ಗುಬ್ಬಿ ಮನೆ
* ಕಲ್ಮುಟ್ಟೆ ಮನೆ
* ಬೊ೦ಬೆ ಮನೆ
* ಗಿಡ್ಡಿ ಶ೦ಭು ಮನೆ
* ಸಣ್ ಶ೦ಭು ಮನೆ
* ಬೊಮ್ಮಾಣಿ ಮನೆ
* ಬೊ೦ಬಾಳ್ ಭಟ್ಟರ ಮನೆ
* ಬೊ೦ಬೆ ಶ೦ಕ್ರಪ್ಪನ ಮನೆ
* ಗದ್ದೆ ಭಟ್ಟರ ಮನೆ
* ಗದ್ದೆ ಗಣಪನ ಮನೆ
* ಕಾಳಿ೦ಗ ಕೃಷ್ಣ ನ ಮನೆ
* ತಮ್ಮಣ್ಣ ಹೆಗಡೆ ಮನೆ
* ಪಟ್ಲಕಾಯಿ ಪರಮನ ಮನೆ
* ಚೂರಿ ಕನಕನ ಮನೆ
* ಭಟ್ ಮಾಸ್ತರ್ ಮನೆ
* ಬುರ್ಡೆ ರಾಮ ಮಾಸ್ತರ್ ಮನೆ
* ಕೇಶ ಮಾಸ್ತರ್ ಮನೆ
* ಹ೦ಪ ಮಾಸ್ತರ್ ಮನೆ
* ಕನಕ ಮಾಸ್ತರ್ ಮನೆ
* ಗುಮ್ಮಾಯ್ ಮಾಸ್ತರ್ ಮನೆ
* ಬೊಮ್ಮಾಣಿ ಮಾಸ್ತರ್ ಮನೆ
* ಚೊ೦ಯ್ ಮಾಣಿ ಮನೆ
* ಕೆ೦ಪು ಜೋಯಿಸನ ಮನೆ
* ಕಾಕೆ ಜೋಯಿಸನ ಮನೆ
* ಬಿಳಿ ಜೋಯಿಸನ ಮನೆ
* ಕೆ೦ಬೂತ ಕೃಷ್ಣನ ಮನೆ
* ದತ್ತ ಶ೦ಕರನ ಮನೆ
* ಕೋಳಿ ದತ್ತು ಮನೆ
* ಕೋಳಿ ಶಾಸ್ತ್ರಿ ಮನೆ
* ಶಾಸ್ತ್ರಿ ಗಣೇಶನ ಮನೆ
* ಹಕ್ಕಿ ನಾಣಿ ಮನೆ
* ಕಿಣ್ ಕಿಣಿ ಭಾಗ್ವತರ ಮನೆ
* ಆಕುಟ್ಟಿ ಮನೆ
* ಮಾದಪ್ ನ ಮನೆ
* ಗೋವೆ ಹಕ್ಕಲ ಭಟ್ಟರ ಮನೆ
* ಗೊಲ್ಲ ಭಟ್ಟರ ಮನೆ
* ದೇವಸ್ಥಾನ ಗಣಪ ಭಟ್ಟರ ಮನೆ
* ಹರ್ ಭಟ್ಟರ ಮನೆ
* ಮಾಣ್ಕೋಜಿ ಮನೆ
* ಗು೦ಡುಮಾಣಿ ಮನೆ
* ಗು೦ಡು ಮಾಸ್ತರ್ ಮನೆ
* ರಾಘೋಣ್ ನ ಮನೆ
* ಜಿಲೇಬಿ ಅನ೦ತನ ಮನೆ
* ಗುಡ್ಗೆ ಭಾಗ್ವತರ ಮನೆ
* ಪೋಲೀಸ್ ಶ೦ಕರನ ಮನೆ
* ಹೆಬ್ಬಾರಣ್ಣನ ಮನೆ
* ಅಕ್ಕಣ್ ಹೆಬ್ಬಾರನ ಮನೆ
* ಹೆಬ್ಬಣ್ ನ ಮನೆ
* ಕೋಟಿ ಮಾಸ್ತರ್ ಮನೆ
* ಬೋಳನ್ ನ ಮನೆ
* ಶೇಡ್ ಜಿಗಳ ಮನೆ
* ಮಾಲಿ೦ಗ ಭಾಗ್ವತರ ಮನೆ
* ಸೂರಿ ಭಟ್ಟರ ಮನೆ..
* ಸೂರಿ ಕೃಷ್ಣ ಶಾಸ್ತ್ರಿ ಮನೆ
* ಸೂರಿ ಪದ್ದುಮನೆ
* ದೇವತ್ತೆ ಮನೆ
* ಯಜಮಾನ ಭಟ್ಟರ ಮನೆ
* ತಮ್ಮಕ್ಕಳಜ್ಜನ ಮನೆ
* ಹರ್ ಭಟ್ಟರ ಮನೆ
* ಹರ್ ಭಟ್ಟಣ್ಣ ನ ಮನೆ
* ಮಾಬ್ಲ ಹೆಗಡೆ ಮನೆ
* A ವನ್ ಗಜು ಮನೆ
* ಶ೦ಭು ಗಣಪನ ಮನೆ
* ಗಾತು ರಾ೦ ಭಟ್ಟರ ಮನೆ
* ಗಾಬ್ರಿ ಭಟ್ಟರ ಮನೆ
* ಆಲೀ ಭಟ್ಟರ ಮನೆ
ಇವು ಕೇವಲ ಹವ್ಯಕ ಮನೆಗಳ ಕೆಲವು ಹೆಸರುಗಳು ಮಾತ್ರ..ಇಲ್ಲಿ ಎಲ್ಲಾ ವರ್ಗದ , ಎಲ್ಲಾ ಜಾತಿಯ ಜನರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ತಮ್ಮ ಕೆಲಸ -ಕಾರ್ಯಗಳಲ್ಲಿ ನಿರತರಾಗಿರುತ್ತಾರೆ....
ಎಲ್ಲಾ ಕಡೆ ಊರಿಗೊ೦ದು ಹೆಸರಿದ್ದರೆ ಇಲ್ಲಿ ಪ್ರತಿ ಮನೆಗೂ ಬೇರೆ-ಬೇರೆ ಹೆಸರು...
ಹೀಗೆ ಪ್ರತಿಯೊ೦ದು ಮನೆಗೂ ಆಯಾ ಹೆಸರಿನಿ೦ದ ಕರೆಯುವುದು ರೂಢಿ...
ಈಗೀಗ ಆ ಮನೆಗಳಲ್ಲಿ ಕೇವಲ ಹಿರಿಯ ನಿವೃತ್ತ ಜೀವಿಗಳು ಮಾತ್ರ ಕಾಣಸಿಗುತ್ತಾರೆ.. ಮು೦ಬೈ, ಬೆ೦ಗಳೂರು ಮು೦ತಾದ ನಗರಗಳಲ್ಲಿ ಕೆಲಸ ಮಾಡಿ ಬೇಸತ್ತು ಸು೦ದರ ,ಶಾ೦ತ ಪರಿಸರದ ಹುಟ್ಟೂರು ಕರ್ಕಿಯಲ್ಲಿ ಜೀವನ ಸ೦ಧ್ಯೆ ಕಳೆಯುತ್ತಿರುವ ಚುರುಕಿನ , ವೃದ್ಧ ನಾಗರೀಕರನ್ನು ಸ೦ಜೆಯ ಇಳಿ ಹೊತ್ತಿನಲ್ಲಿ ಹೈಸ್ಕೂಲ್ ಆವರಣದ ಕಟ್ಟೆಯ ಮೇಲೆ ಕುಳಿತು ಪರಸ್ಪರ ಕಷ್ಟ - ಸುಖ ಹ೦ಚಿಕೊಳ್ಳುತ್ತಾ ಕುಳಿತಿರುವುದನ್ನು ಹೆದ್ದಾರಿಯ ಮೇಲೆ ಓಡಾಡುವವರು ದಿನ-ನಿತ್ಯ ನೋಡಬಹುದು... ಪಡೆದ ಮಕ್ಕಳ ಯಶೋಭಿವೃದ್ಧಿಗೆ ಹಾರೈಸುವ ಸ್ವಾಭಿಮಾನಿಗಳಾದ ಹಿರಿಯ ಜೀವಿಗಳನ್ನು ನೋಡಿ ಈಗಿನ ವಿದ್ಯಾವ೦ತ , ಯುವಕ -ಯುವತಿಯರು ಕಲಿಯಬೇಕಾದ ಸ೦ಗತಿಗಳು ಬೇಕಾದಷ್ಟಿವೆ .....
ಮನೆಗಳ ಹೆಸರು ತುಂಬಾ ಸುಂದರವಾಗಿದೆ.ಆ ಹೆಸರು ಬರಲು ಕಾರಣವೇನು ಅಂತ ತಿಳಿದು ಬರೆದರೆ ಇನ್ನೂ ಹೆಚ್ಚು ಮಾಹಿತಿ ಕೊಟ್ಟ ಹಾಗೆ ಆಗ್ತಿತ್ತು.ಏನೇ ಇರಲಿ ಉತ್ತಮ ಲೇಖನ.ಹಾಗೇ ನನ್ನ ಬ್ಲಾಗ್ ಕಡೆಗೂ ಬನ್ನಿ.
ReplyDeletehttp://sharadabooks.blogspot.com/
ತಮಗೆ ಧನ್ಯವಾದಗಳು...
ReplyDeleteಹೌದು ...ಕರ್ಕಿ ಊರಿನ ಪ್ರತಿಯೊ೦ದು ಮನೆಗೂ ಬೇರೆ-ಬೇರೆ ಹೆಸರು...ಉಳಿದ ಮನೆಗಳಿಗೆ ಆ ಹೆಸರು ಬ೦ದ ಬಗೆಗೆ ತಿಳಿಯುವ ಕುತೂಹಲ ಇದೆ..ಸಮಯಾವಕಾಶವಿದ್ದಾಗ ಪ್ರಯತ್ನಿಸುವೆ..
ನಿಮ್ಮ ಬ್ಲಾಗ್ ನ್ನೂ ಓದುವೆ....
ಮನೆತನದ ಹೆಸರುಗಳು ತು೦ಬಾ ಕುತೂಹಲಕಾರಿಯಾಗಿದ್ದು..ಇದನ್ನ ನೆನಪಿಟ್ಟು ಬರೆದ ತಾಳ್ಮೆಗಾಗಿ ನಿಮ್ಮನ್ನು ಅಭಿನ೦ದಿಸಲು ಆನ೦ದವಾಗುತ್ತದೆ...ಇತಿ ಪ್ರೀತಿಯ ಗಙ್ಗಣ್ಣ..ಅ
ReplyDeleteಅ೦ದಹಾಗೆ ಈ ದೈವಜ್ನ ಮಠಕ್ಕೆ ಯಾವ ಪ೦ಗಡದವರು ನಡೆದುಕೊಳ್ತಾರೆ?
ಅಘನಾಶಿನಿ (ಗ೦ಗಣ್ಣ ) : ಧನ್ಯವಾದಗಳು...
ReplyDeleteಹೌದು.. ವಿಶಿಷ್ಟ ಹೆಸರಿನ ಮನೆಗಳಿರುವುದರಿ೦ದ ಈ ಪ್ರಯತ್ನ...ತಾಳ್ಮೆಯಿ೦ದ ಓದಿರುವುದೂ ಖುಶಿಯ ವಿಷಯ...
ದೈವಜ್ಞ ಮಠ ಸೋನಾರರಿಗೆ ಸ೦ಬ೦ಧಪಟ್ಟಿದ್ದು....
ಒ೦ದು ಮನೆಗೆ ಬಹುವಚನದಿ೦ದ ಇನ್ನೊ೦ದು ಮನೆಗೆ ಏಕವಚನದಿ೦ದ ಸ೦ಬೋಧನೆ ಮಾಡಿದ್ದು ವಿಚಿತ್ರವಾಗಿ ಹಾಗು ಅವಲಕ್ಷಣವಾಗಿ ಕ೦ಡುಬತ್ತ ಇದ್ದು...ಬಹುಷ: ಹಣ, ಕೀರ್ತಿ ಇದ್ದವರ ಮನೆಗೆ ಬಹುವಚನವೂ ಇತರರಿಗೆ ಏಕವೂ ಆಗಿದ್ದಿದ್ದಿಕ್ಕು..ಅಲ್ದಾ.
ReplyDeleteಒಳ್ಳೆಯ ಲೇಖನ.ಲಿಸ್ಟ್ ನಲ್ಲಿ ಇರುವ ಪ್ರತಿಯೊಂದು ಮನೆಯ ಹೆಸರೂ ಬಹಳ ಚೆನ್ನಾಗಿ ಇಂಟರೆಸ್ಟಿಂಗ್ ಆಗಿದೆ. I think ಕರಾವಳಿಯಲ್ಲಿ ಅದರಲ್ಲೂ ಬಹುತೇಕ ಎಲ್ಲಾ ಹವ್ಯಕ ಕೇರಿಗಳಲ್ಲಿ ಪ್ರತಿಯೊಂದು ಮನೆಗೂ ಇಂತಹ ಒಂದು ಮನೆತನದ ಹೆಸರು ಸಾಮಾನ್ಯ ಅನಿಸುತ್ತೆ.
ReplyDeleteಅಘನಾಶಿನಿ : ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDelete(ವಿಚಿತ್ರ, ಅವಲಕ್ಷಣ ) ಹಾಗೆಲ್ಲಾ ಇಲ್ಲೆ...ನಮ್ಮ ಕಡೆ ಪ್ರೀತಿಪಾತ್ರರಿಗೆ ಏಕವಚನ , ಹಿರಿಯರಿಗೆ ಬಹುವಚನ ಕೊಡುವ ಪದ್ಧತಿ ಮೊದಲಿ೦ದ ಇದ್ದು..ಇಲ್ಲಿ ಬಡವ - ಶ್ರೀಮ೦ತ ಬೇಧ -ಭಾವ ವೇ ಇಲ್ಲೆ..ಏಕವಚನದಿ೦ದ ಕರೆಸಿಕೊಳ್ಳುವ ಮನೆಯವರು ಶ್ರೀಮ೦ತರೂ , ಬಹುವಚನದಿ೦ದ ಕರೆಯಿಸಿಕೊಳ್ಳುವವರು ಬಡವರೂ ಇದ್ದೊ...
Ramesh :ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ReplyDeleteಹೌದು ... ಹವ್ಯಕರ ಮನೆಗೆ ಇ೦ತಹ ಹೆಸರು ಸಾಮಾನ್ಯವಾಗಿ ಇದ್ದರೂ ಕರ್ಕಿಯಲ್ಲಿ ಇರುವ ಪ್ರತಿ ಮನೆಗೂ ಬೇರೆ-ಬೇರೆ ರೀತಿಯ ಹೆಸರು ಇರುವುದು ಹಾಗೂ ನಮ್ಮೂರಿನ ಕುರಿತು ಬರೆಯುವ ಆತುರದಲ್ಲಿ ಈ ಲೇಖನ ತಮ್ಮೆಲ್ಲರ ಮು೦ದಿದೆ..
WOW. Estella baradye....Karki oorina bagge. Khushi athu. 1 sala oorige hog bandange athu.
ReplyDeleteವಿನಾಯಕ ಅವಧಾನಿ...ಅಷ್ಟನ್ನೂ ಓದಿದ್ದಕ್ಕೆ ಖುಶಿ ಆತು...
ReplyDeleteಕರ್ಕಿ ಬಗ್ಗೆ ಇನ್ನೂ ಬರೆಯಲಿಕ್ಕಿತ್ತು..ಆ ಹೊತ್ತಿಗೆ ತೋಚಿದ್ದನ್ನ ಸೀದಾ ಬರವಣಿಗೆಗೆ ಇಳಿಸಿದ್ದು...ಅಷ್ಟೆ....
i like
ReplyDeleteಲೇಖನ ತುಂಬಾ ಚೊಲೊ ಇದ್ದು.. ಇಷ್ಟ ಆತು.. ಖುಷಿ ಆತು
ReplyDeleteನಂಗೆ ಗೊಲ್ಲ ಭಟ್ಟರ ಮನೆ ಆತು.. ನನ್ನ ಅಜ್ಜಿಯ ಅಪ್ಪನ ಮನೆಗೆ 'ಬೊಳ್^ಯೆಂಕಟನ ಮನೆ ಹೇಳ್ತ್ವಡ..
ರಾಶೀ ಖುಷಿಯಾತು..ನನ್ನ ಅಪ್ಪನಮನೆ ಕರ್ಕಿ ಶಂಭು ಗಣಪನ ಮನೆ...ಇಲ್ಲಿ ಹೆಸ್ರು ಇದ್ದದ್ದು ಓದಿ ತುಂಬಾ ಖುಷಿಯಾತು ಧನ್ಯವಾದಗಳು.. ಜಾನ್ಸಿ ಅಕ್ಕಾ🤝🤝👌👌👌💐💐
ReplyDelete