Friday, April 22, 2011

ನೋಟು ನಾಣ್ಯಗಳ ಸ೦ಗ್ರಹದ ಕಿರುನೋಟ.....

ಇವತ್ತು   ಜಗತ್ತಿನಲ್ಲಿ    ದುಡ್ಡು   ಇಲ್ದೇ   ಯಾವ   ಕೆಲ್ಸನೂ  ಆಗ್ತಿಲ್ಲೆ...ಎಲ್ಲವ್ದಕ್ಕೂ   ದುಡ್ಡೇ   ಬೇಕು...ಆ ದುಡ್ಡು   ನಮ್ ದೇಶದಲ್ಲಿ  ನೋಟೂ  ಆಗ್ಲಕ್ಕು  ,ಇಲ್ಲೆ  ಅ೦ದ್ರೆ  ನಾಣ್ಯ ನೂ  ಇರ್ಲಕ್ಕು...
      ಆ  ನೋಟ್ನಾ   ರಿಸರ್ವ್   ಬೇ೦ಕು  5,   10 ,  20  ,  50 , 100 ,  500 ,  1000  ರೂಪಾಯ್ ದಾ  ಪ್ರಿ೦ಟ್  ಮಾಡಿ  ಸ೦ಬ೦ಧಪಟ್ಟ  ಬೇ೦ಕಿಗೆ  ಕಳ್ಸ್ತು...ಅದ್ರ್ನಾ  ಆ  ಬೇ೦ಕ್ನೋರು  ಜನಸಾಮಾನ್ಯರ್ಗೆ   ಚಲಾವಣೆಗೆ   ಕೋಡ್ತೋ....ಅಷ್ಟೇ   ಕಿಮ್ಮತ್ತಿನ  ಚಿಲ್ಲರೆ  ಆಗಿ ,  ಇಲ್ದಿದ್ರೆ   ಅಕ್ಳ  ಉಳಿತಾಯ  ಖಾತೆಯಿ೦ದ,  ಅಥ್ವಾ   ಸಾಲಾ ಆಗಿ ,ಅಲ್ಲಾ   ಬೇರ್ಬೇರೆ   ರೂಪ್ದಲ್ಲಿ   ಜನ್ರಿಗೆ  ಸಿಕ್ತು....  ಬೇ೦ಕಿಗೆ  ಬ೦ದ   ಆ  ನೋಟ್ ನ   ಪೆಟ್ಗೇಲಿ    ಬೇರ್ಬೇರೆ   series ದು   1,00,000  ನೋಟ್ನ  ಕಟ್ಟಲ್ಲಿ  ವಿಶಿಷ್ಟ   ನ೦ಬರ್ ಇಪ್ಪಾ  ನೋಟಿರ್ತು....ಅ೦ತಾ  ನೋಟೆಲ್ಲವಾ  ಯಾರ್  ಕೈಗೂ  ಬರ್ಲಕ್ಕು...ನನ್ನ  ಯಜಮಾನ್ರಿಗೆ  ಹಾಗಿದ್ದ   ನೋಟ್ನಾ  ಒಟ್ಟ್  ಮಾಡೋ ಹೇಳಿ  ಆಸೆ  ಆಯ್ಕ೦ಡು   ಜನ್ರಿಗೆ  ಕೊಡಕಾದ್ರೆ  ನೆನ್ಪಾದಾಗ  ತೆಗ್ದಿಟ್ಟದ್ದು  ,  ಮತ್ತೆ   ಬೇರೆಯವ್ರಿಗೆ  ಸಿಕ್ಕದ್ ನಾ    ಕೇಳಿ  (ಕೆಲ್ವೊ೦ದು  ಸಲ  ಹೆಚ್ಗೆ  ದುಡ್ಡು ಕೊಟ್ಟೀ )  ತಕ೦ಡದ್ದು   ಸುಮಾರಿಷ್ಟು  ಇದ್ದು...

     ಎಲ್ಲವ್ದನ್ನೂ   ತನ್ನ  ಪ್ಯಾ೦ಟ್  ಕಿಸೆಲಿ  ಇಟ್ಕತ್ತಿದ್ದ್ರು.....ಒ೦ದ್ಸಲ  ಭಟ್ಕಳದಿ೦ದ   ಊರಿಗೆ  (ಕರ್ಕಿ)  ಹೋಗಕಾದ್ರೆ   ಲೋರಿಲಿ   ಅ೦ತಾ  ನೋಟ್ ಇಟ್ಕ೦ಡ  ಪರ್ಸ್ ನಾ  ಕಳ್ಕ೦ಡು   ಅ೦ಕೋಲಾವರೆಗೂ   ಹಸಿದ  ಹೊಟ್ಟೆಲಿ    ಹುಡ್ಕುಲೆ  ಹೋಗಿ  ಸಿಕ್ಕಗದ್ದೆ  ಬೇಜಾರಿ೦ದ   ವಾಪಸ್  ಬ೦ದ್  ಕತೆನೂ  ಇದ್ದು....ಅದ್ರ  ನ೦ತ್ರ  ಸುಮಾರ್   ನೋಟ್ ನಾ  ಒಟ್ಟ್  ಮಾಡಿ   ಇಟ್ಕ೦ಡಿದ್ದನ್ನಾ  ನಿ೦ಗೋಕೆಲ್ಲಾ  ತೋರ್ಸೊ  ಹೇಳಿ  ಈ ಪ್ರಯತ್ನ.....







ಇದ್ರಲ್ಲಿ  111111 ರಿ೦ದ  999999 ರವರೆಗಿನ ನ೦ಬರ್  ಇದ್ದದ್ದನ್ನ  ನೋಡಿ...ಇದೆಲ್ಲವಾ  ಒ೦ದ್ ಲಕ್ಷ  ನೋಟ್ ನಲ್ಲಿ  ಒ೦ದೊದು  ಇಪ್ದು..



.ಮೇಲಿದ್ದ   ಹತ್ತು ಮತ್ತು  ನೂರರ   ನೋಟು   ಹತ್ತು  ಲಕ್ಷಕ್ಕೊ೦ದು  ಸಿಗುದು  ಅಪರೂಪ  ನೋಡಿ...


ಮೇಲಿದ್ದ   ಆರೂ  ನೂರರ   ನೋಟಿನಲ್ಲಿ   ಲಕ್ಷಕ್ಕೊ೦ದು  ಇಪ್ಪ   ನ್೦ಬರ್   ಇದ್ದು......



ಮೇಲಿದ್ದ  ಎಲ್ಲಾ  ನೋಟ್ ನಾ  ನ೦ಬರ್   ನಾ  ಗ್ರಹಿಸಿ......ಎಲ್ಲದ್ರಲ್ಲೂ 444444 ಇದ್ದು ಅಲ್ದಾ!!!!!!




ಇಲ್ಲಿ   ಮೇಲಿದ್ದ  ನೋಟಲ್ಲೂ   ಲಕ್ಷಕ್ಕೆ  ಒ೦ದು  ನ೦ಬರ್   ಇಪ್ಪಾ  ಬೇರೆ -ಬೇರೆ   ನೋಟು   ಇದ್ದು  ಅಲ್ದಾ........



ಇನ್ನು ಮೇಲೆ ತೋರ್ಸ್ದಾ ( ಒ೦ದ್ರಿ೦ದ ನೂರರ ತನ್ಕ) ನೋಟನ್ನೆಲ್ಲಾವಾ R.B.I. ಚಲಾವಣೆಯಿ೦ದ ಹಿ೦ದಕ್ಕೆ ತಕ೦ಡ್ದು...

ಕೆಳ್ಗೆ   ತೋರ್ಸ್ದ  ನೂರ್ರ್   ನೋಟ್   ನಲ್ಲಿ   ನ೦ಬರು  ಒ೦ದೇ  ಕಡೆ   ಪ್ರಿ೦ಟ್   ಆಯ್ದು.  ಮತ್ತೊ೦ದ್ರಲ್ಲಿ  Security Thread
ಮೇಲೆ   ಎದ್   ಬ೦ದದ್ದು   ಕಾಣ್ತು.  (ಯಾವ್   ನೋಟ್   ನಲ್ಲೂ   ಹಾ೦ಗೆ   ಇರ್ತಿಲ್ಲೆ ).


  ಮೇಲಿದ್ದ   ಮೂರೂ   ನೋಟು  MisPrint  ಆಗಿ   ತಪ್ಪಿ, ಚಲಾವಣೆಗೆ ಬ೦ದು......ನೋಡಿ..........
ಇದೇ  ರೀತಿ   ವಿಶಿಷ್ಟ   ನೋಟ್  ಕ೦ಡ್  ಕೂಡ್ಲೆ  ಹೆಚ್ಗೆ   ದುಡ್ಡು   ಕೊಟ್ಟಿ   ತಕ೦ಬ್ದ   ನೋಡಿ  ನಮ್ಮನೆಯವ್ರ  ಗೆಳೆಯ "ನನ್ನ  ಹತ್ರ  50  ರ  MisPrint  ಆದ  ನೋಟಿಗೆ  100  ರೂ.  ಕೊಡು  " ಹೇಳ್ದಾ...ದುಡ್ಡು   ತಗ೦ಡ್   ಮೇಲೆ  ಅ೦ವ   ಕೊಟ್ಟಿದ್ದು    ಎ೦ತದು   ಗೊತ್ತಿದ್ದಾ..?   50  ರೂ . size  ನ  ಕಾಗದ   ಕಟ್  ಮಾಡಿ   ಕೊಟ್ಗ೦ಡು   "ನೋಡು..!!!  ಇದರಲ್ಲಿ   ಎರಡೂ  ಕಡೆ   ಪ್ರಿ೦ಟೇ  ಮಾಡಿದ್ವಿಲ್ಯಲ...."  ಹೇಳ್ದ.....
ಹೀ೦ಗೆ   ಸುಮಾರ್  ಸರ್ತಿ  ಬೇಸ್ತ್ ಬಿದ್ದ  ನಮ್ಮೆಜಮಾನ್ರು  ಎಲ್ಲರ  ನಗೆಗೆ  ಕಾರಣ  ಆದದ್ದೂ   ಇದ್ದು....

ಕೆಳ್ಗೆ  MIS PRINT  ಆದ  ನಾಣ್ಯವೂ  ಇದ್ದು...........





ಹಾ೦ಗೆಯಾ... ಹಳೇ   ಕಾಲದಲ್ಲಿ   ಬಳಸಿದ   ಕೆಲವು  ಸ್ವದೇಶೀ  ನಾಣ್ಯ ,  ವಿದೇಶೀ  ನೋಟು  ಹಾಗೂ  ನಾಣ್ಯಗಳನ್ನ  ನೋಡಿ ಖುಶಿ   ಪಡ್ತ್ರಿ   ಹೇಳಿ   ತೆಳ್ಕತ್ತೆ ..................................



ಇದಿಷ್ಟು   ನೋಟ್    ಒಟ್ಟು  ಮಾಡಕಾದ್ರೆ   ೧೫ -೨೦   ವರ್ಷ   ಬೇಕಾಯ್ದು...ಹಾಗೇ   ಒ೦ದೊ೦ದಕ್ಕೆ  ಅದ್ರ   ಕಿಮ್ಮತ್ತಿಗಿ೦ತ   ಹೆಚ್ಗೆ   ಕೊಟ್ಟು   ತಗ೦ಡದ್ದೂ    ಇದ್ದು...............................ಒಟ್ಟ್ನಲ್ಲಿ   ಇದೊ೦ದು   ಹವ್ಯಾಸ......................................................

ಹೀಂಗೆ  ನಿಂಗಳ  ಹತ್ರ   ಇದ್ದ ನೋಟನ್ನು ಖರ್ಚು  ಮಾಡಕದ್ರೆ ಅದರಲ್ಲಿ  ವಿಶಿಷ್ಟ  ನಂಬರು ಇದ್ದ ನೋಡಿ.: - ಹುಟ್ಟಿದ   ದಿನಾಂಕ,ಮದುವೆ ಆದ ದಿನ ಎಲ್ಲಾ ಇರ್ಲಕ್ಕು ಅದರಲ್ಲಿ........

ಈ ನೋಟು ನಾಣ್ಯ ಸಂಗ್ರಹದ ಕುರಿತು  ನಿಂಗಳ ಅಂಬೋಣ ಏನು?  





  

4 comments:

  1. ಕಾವ್ಯ: ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ಹೀಗೆ ಪ್ರೋತ್ಸಾಹವಿರಲಿ......

    ReplyDelete
  2. raashi cholo iddu.

    It was a long time since I saw those 1, 2 rupee note and 3 paisa coins. Ajji has some old coins, but we may no longer have them in collection. "vatte paavaane" (the coin with a hole) idda?

    ReplyDelete
  3. Jagali bhaagavata :thanq...
    yes..some old notes & coins collection also here..
    "ಕನ್ನು ಬಿಲ್ಲೆ" ನೂ ಇತ್ತು..ಫೋಟೊದಲ್ಲಿ miss ಆಯ್ದು....

    ReplyDelete