ಅ೦ದು ನಮ್ಮಣ್ಣನ ಮದುವೆ...ನಮ್ಮ ಮನೆಯಲ್ಲಿಯೇ ಸ೦ಭ್ರಮದ ತಯಾರಿ ನಡೆದು ನೆ೦ಟರಿಷ್ಟರೆಲ್ಲ ಒಬ್ಬೊಬ್ಬರಾಗಿ ಸೇರತೊಡಗಿದ್ದರು..ಅವರಲ್ಲಿ ನಮ್ಮ ಸ೦ಬ೦ಧಿಗಳಲ್ಲೊಬ್ಬರಾದ ೪೦-೪೫ ವರ್ಷಗಳ ಸ೦ಪ್ರದಾಯಬದ್ಧರಾದ , ಗಡಿ-ಬಿಡಿ ಸ್ವಭಾವದ ಮಾವನವರು ನಮ್ಮೆಲ್ಲರೊಡನೆ ಬೆರೆತು ಉತ್ಸಾಹದಿ೦ದ ಓಡಾಡುತ್ತಿದ್ದರು..
ಮದುವೆಯ ದಿನ ಮುಹೂರ್ತ ಇತ್ಯಾದಿ ಕಾರ್ಯಕ್ರಮಗಳು ಮುಗಿದು ಊಟದ ತಯಾರಿಯೂ ನಡೆದಿತ್ತು.. ಮನೆ ತು೦ಬಾ ನೆ೦ಟರಿಷ್ಟರೂ, ಗೆಳೆಯರೂ ತು೦ಬಿಕೊ೦ಡು ಗದ್ದಲದ ವಾತಾವರಣ ಏರ್ಪಟ್ಟು ಕಳೆಗೊ೦ಡಿತ್ತು..ಆಗ ನಮ್ಮ ಸ೦ಬ೦ಧಿ ಮಾವನವರು ಊಟಕ್ಕೆ ಕುಳಿತುಕೊಳ್ಳುವ ಮೊದಲು ನಾರು ಮಡಿಯನ್ನುಡಲು ಕೋಣೆಯಲ್ಲಿರುವ ಗೂಟಕ್ಕೆ ನೇತಾಡುವ ಕೆ೦ಪು ವಸ್ತ್ರವನ್ನು ಸುತ್ತಿಕೊ೦ಡು ಊಟಕ್ಕೆ ಬಾಳೆ ಎಲೆಯ ಮು೦ದೆ ಕುಳಿತರು..ಅಲ್ಲಿ ಒಳಗಡೆ ನಮ್ಮಜ್ಜಿಯು ತನ್ನ ಕೆ೦ಪು ಸೀರೆಯು ಎಲ್ಲೂ ಕಾಣುವದಿಲ್ಲ,,ಯಾರೋ ಕದ್ದಿರಬೇಕೆ೦ದು ಬೊಬ್ಬೆ ಹೊಡೆಯುತ್ತಿದ್ದರು.. ( ನಮ್ಮಲ್ಲಿ ವಿಧವೆಯರು ಕೆ೦ಪು ಸೀರೆಯನ್ನು ತಲೆ ಮೇಲೆ ಹೊದ್ದು ಉಡುವದು ಹಳೆ ವಾಡಿಕೆ ) ಹಾಗೆಯೇ ತನ್ನ ಸೀರೆಗಾಗಿ ಬೊಬ್ಬಿಡುತ್ತಾ ಹೊರಗೆ ಊಟದ ಜಾಗಕ್ಕೆ ಬ೦ದಾಗ ಅದನ್ನು ಮಾವನವರು ಉಟ್ಟು ಕುಳಿತಿರುವದನ್ನು ಕಒಡು ತಬ್ಬಿಬ್ಬಾಗಿ ಅವರನ್ನು ಪ್ರಶ್ನಿಸುತ್ತಿದ್ದರು..ಇದನ್ನೆಲ್ಲ ನೋಡಿ ನೆ೦ಟರಿಷ್ಟರೆಲ್ಲ ಗು೦ಪುಗೂಡಿ ಏನೆ೦ದು ವಿಚಾರಿಸತೊಡಗಿದಾಗ ಮಾವನವರ ಸ್ಥಿತಿ ಹೇಗಾಗಿರಬೇಡ...!!!!!!!
ಲಕ್ಷ್ಮಿ ಜಗದೀಶ ಭಟ್ಟ ಬುರ್ಡೆ - ಭಟ್ಕಳ... ಸುಧಾ ಯುಗಾದಿ ವಿಶೇಷಾ೦ಕ ೧೯೯೯
ಓದುಗರ ವೇದಿಕೆ ವಿಭಾಗ

No comments:
Post a Comment