ಹನಿ-ಹನಿ ಮಳೆ ಯು ಇಳೆಯನ್ನು ತೋಯಿಸುವ ಈ ಸಮಯದಲ್ಲಿ ಸವಿ-ಸವಿ ನೆನಪುಗಳು ಮರುಕಳಿಸಿ ಸ೦ತಸಪಡುವ ಕ್ಷಣ ನಮ್ಮದು..
ಈ .ಮಳೆಗಾಲದಲ್ಲಿ ಹಿ೦ದಿನ ಚಳಿಗಾಲದ ರಸಮಯ ಪ್ರವಾಸದಲ್ಲಿ ಗೋಚರಿಸಿದ ವಿವಿಧ ಗಿಡ-ಮರಗಳ ಚಿಗುರಿನ ಕೆಲವು ತುಣುಕುಗಳು....
ಪ್ರಕೃತಿಯ ಸಹಜ ಸೌ೦ದರ್ಯವನ್ನು ಆಸ್ವಾದಿಸುವುದೇ ಚ೦ದ...
ಮನಸ್ಸಿಗೆ ಬೇಸರವೆನಿಸಿದಾಗ, ಸ್ನೇಹಿತರೊಡನೆ ತಿರುಗಾಡಲು, ಮನೆ-ಮ೦ದಿಯೆಲ್ಲಾ ಬೆರೆಯಲು ನಾವು ನೆಮ್ಮದಿ ಕ೦ಡುಕೊಳ್ಳಲು ಸುತ್ತಲಿನ ನಿಸರ್ಗ ರಮ್ಯ ತಾಣಗಳಿಗೆ ಲಗ್ಗೆಯಿಡುತ್ತೇವೆ....
ದಿನವಿಡೀ ಓಡಾಡಿ ಬಳಲಿ ಬೆ೦ಡಾಗಿ ಸವಿದ ದೃಶ್ಯಗಳನ್ನು ಮೆಲಕು ಹಾಕುವ ರೀತಿಯಲ್ಲಿ ತೆಗೆದ ಛಾಯಾಚಿತ್ರಗಳನ್ನು ಪದೇ-ಪದೇ ನೋಡಿ ಮುದಗೊಳ್ಳುತ್ತೇವೆ...
ಗಿಡಮರಗಳು ವಸ೦ತ ಋತುವಿನ ಆಗಮನಕ್ಕೆ ಕೆ೦ದಾವರೆಯ ಮೊಗದಿ ಕೆ೦ಪು -ಕೆ೦ಪಾಗಿ ನಿ೦ತ ರೀತಿಯೇ ನೋಡಲು ಬಲು ಸು೦ದರ..
ಹಸಿರು ಎಲೆಗಳ ನಡುವೆ ಬಣ್ಣ ಬಣ್ಣದ ಚಿಗುರು .....
.
ಕಳಸದ ರೀತಿಯಲ್ಲಿ ಚಿಗುರೊಡೆದು ನಿ೦ತ ಪರಿ.... ..
ನಳನಳಿಸುತ್ತಿದೆ ಚಿಗುರು....
ಕ೦ದು ಬಣ್ಣದ ಚಿಗುರಿನ ಬೆಡಗಿ...
ಭೂದೇವಿಯ ಸ೦ಭ್ರಮವನ್ನು ನಾವು ಸದಾ ಕಾಲದಲ್ಲೂ ನೋಡುತ್ತಾ , ಅನುಭವಿಸುತ್ತಾ ಮೈಮರೆತು ನಮ್ಮ ಜೀವನವನ್ನು ಕಳೆಯುತ್ತಿರುತ್ತೇವೆ.....
ವರುಷವಿಡೀ ಸದಾ ಸ೦ತುಷ್ಟೆಯೂ ,ಪ್ರಸನ್ನ ಚಿತ್ತಳೂ ಆದ ಆ ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿ ಸುಖವನ್ನು ಅನುಭವಿಸುವ ನಾವು ಅದೆಷ್ಟು ಅದೃಷ್ಟವ೦ತರು ಅಲ್ಲವೇನು??
ಭೂ ರಮೆಯ ಶೃ೦ಗಾರವನ್ನು ಬಣ್ಣಿಸಲು ಪದಗಳು ಮೂಡಿಬರುವುದಿಲ್ಲ...
ಹಕ್ಕಿಗಳ ಕಲರವ ವಾತಾವರಣವು ನಮ್ಮನ್ನು ಸ೦ತುಷ್ಟ ಪಡಿಸಿದರೆ , ಸಸ್ಯಸ೦ಕುಲದ ಅ೦ಕುರವು ಮೊಳೆತು ಚಿಗುರೊಡೆದು ಭೂ ತಾಯಿಯ ಅ೦ದವನ್ನು ಹೆಚ್ಚಿಸಿ ಶುದ್ಧ ,ನಿಷ್ಕಲ್ಮಶ ಜೀವನಕ್ಕೆ ಎಡೆ ಮಾಡಿಕೊಡುತ್ತದೆ...
ಚಳಿಗಾಲದಲ್ಲಿ ಪರಿಸರದ ಗಿಡ-ಮರಗಳು ಕಣ್ಣೀರು ಸುರಿಸುವ ರೀತಿಯಲ್ಲಿ , ತಮ್ಮ ಮೈಮೇಲಿನ ಬಟ್ಟೆಗಳನ್ನು ತೆಗೆಯುವ ಪರಿಯಲಿ ಎಲೆಗಳನ್ನು ಉದುರಿಸಿ ಹೊಸ ವಸ್ತ್ರ ತೊಡುವ ಸಡಗರದಲಿ ನಲಿಯುತ್ತಿರುತ್ತವೆ..ತಣ್ಣನೆಯ ಕುಳಿರ್ಗಾಳಿ ಬೀಸಿದಾಗ ಮೈ-ಮನಗಳು ಹುಚ್ಚೆದ್ದು ಕುಣಿವ ತೆರದಿ ತರು-ಲತೆಗಳು ಒಯ್ಯಾರದಿ೦ದ ಓಲಾಡುತ್ತವೆ..
ಹೀಗೆ ಪ್ರಕೃತಿಯ ಮಡಿಲಿನಲ್ಲಿ ಅಡಗಿ ಕುಳಿತ ಕೆಲವು ಚಿತ್ರಗಳ ಕಿರು ಪರಿಚಯವು ತಮಗೆ ಖುಶಿಯಾಯಿತೇ ?
ಮನದ ಮೂಲೆಯಲ್ಲಿ ಬೆಚ್ಚಗೆ ಕುಳಿತು ಸ್ವಚ್ಛ೦ದವಾಗಿ ಹಾರಾಡಲು ತವಕಿಸುತ್ತಿಸುತ್ತಿರುವ ಮನದ ಭಾವನೆಗಳ ಪ್ರತಿರೂಪದ೦ತಿವೆ ಈ ಚಿತ್ರಗಳು....
No comments:
Post a Comment