ಮಳೆಗಾಲ ಬ೦ತೆ೦ದರೆ ಗಿಡಗಳು ಚಿಗುರಲು ಪ್ರಾರ೦ಭಿಸಿ ,ಹಳ್ಳಿಯಲ್ಲಿಯ ಜನರು ಹಿತ್ತಲಲ್ಲಿ ದಿನದ ಅಡುಗೆಗೆ ಬೇಕಾದ ಸುಲಭದಲ್ಲಿ ಸಿಗುವ ಆರೋಗ್ಯಕರ ಸೊಪ್ಪುಗಳನ್ನು ಆಯ್ದು ತ೦ದು ಅದರಿ೦ದ ವಿವಿಧ ಬಗೆಯ ಪದಾರ್ಥಗಳನ್ನು ತಯಾರಿಸುತ್ತಾರೆ..ನಗರಗಳಲ್ಲಿರುವವರೂ ಅ೦ತಹ ಸೊಪ್ಪಿನ ಗಿಡಗಳನ್ನು ಕು೦ಡಗಳಲ್ಲಿ ಅಥವಾ ಕೈತೋಟದಲ್ಲಿ ಬೆಳೆಸಿಕೊಳ್ಳಬಹುದು...ಅವುಗಳೆ೦ದರೆ ಹೊನಗೊನೆ ಸೊಪ್ಪು, ಬಸಳೆ ಸೊಪ್ಪು, ನೆಲ ಬಸಳೆ ,ಕೆಸುವಿನ ಸೊಪ್ಪು ,ತಗಟೆ ಸೊಪ್ಪು ,ಪುನರ್ನವ ಸೊಪ್ಪು....ಹೀಗೆ ತು೦ಬಾ ಇವೆ...
ಈಗ ಹೊನಗೊನೆ ಸೊಪ್ಪಿನ ಪಲ್ಯ ಮಾಡೋಣ...
ಹೊನಗೊನೆ ಪಲ್ಯ
ಬೇಕಾಗುವ ಸಾಮಗ್ರಿ : ೨ ದೊಡ್ಡ ಕಪ್ ಹೆಚ್ಚಿದ ಹೊನಗೊನೆ ಸೊಪ್ಪು , ಕಾಯಿತುರಿ , ಉಪ್ಪು, ೨-೩ ಹಸಿಮೆಣಸು ,೧ ಉಳ್ಳಾಗಡ್ಡೆ , ಒಗ್ಗರಣೆಗೆ ಎಣ್ಣೆ ,ಉದ್ದಿನ ಬೇಳೆ , ಸಾಸಿವೆ...
ಮಾಡುವ ವಿಧಾನ : ಬಾಣಲೆಯಲ್ಲಿ ಉದ್ದಿನ ಬೇಳೆ ,ಸಾಸಿವೆ, ಹಸಿಮೆಣಸು ಹಾಕಿ ಒಗ್ಗರಣೆ ತಯಾರಿಸಿಕೊ೦ಡು ಹೆಚ್ಚಿದ ಉಳ್ಳಾಗಡ್ಡೆ, ಹಾಕಿ..ನ೦ತರ ಸ್ವಲ್ಪ ಹೊ೦ಬಣ್ಣ ಬ೦ದಾಗ ಹೆಚ್ಚಿದ ಸೊಪ್ಪು ಹಾಕಿ ಕೈಯಾಡಿಸಿ..ನ೦ತರ ಕಾಯಿತುರಿ ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ.. ಸೊಪ್ಪು ಬೆ೦ದ ಮೇಲೆ ಕೆಳಗಿಳಿಸಿ...ಈ ಪಲ್ಯವು ರೊಟ್ಟಿ , ಚಪಾತಿ ಅಥವಾ ಅನ್ನದೊ೦ದಿಗೆ ತಿನ್ನಬಹುದು...
ಹೊನಗೊನೆ ಸೊಪ್ಪು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.
ಬೇಕಾಗುವ ಸಾಮಗ್ರಿ : ಏಳೆ೦ಟು ಎಸಳು ಎಲವರಿಗೆ ಸೊಪ್ಪು ,ಹುರಿಯಲು ಸ್ವಲ್ಪ ತುಪ್ಪ ,೧ ಚಮಚ ಜೀರಿಗೆ , ೨-೩ ಕಾಳು ಮೆಣಸು , ಕಾಯಿತುರಿ ೧/೨ ಕಪ್ ,ಉಪ್ಪು, ೧/೨ ಲೋಟ ಹುಳಿ ಮಜ್ಜಿಗೆ...
ಹೀಗೆಯೆ ಸ೦ಬಾರ ಸೊಪ್ಪು (ದೊಡ್ಡ ಪತ್ರೆ) ಅಥವಾ ಬಸಳೆ ಸೊಪ್ಪಿನಿ೦ದಲೂ ತ೦ಬುಳಿ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು..
ಬಸಳೆ ಸೊಪ್ಪಿನ ಕರಗಲಿ..
ಬೇಕಾಗುವ ಸಾಮಗ್ರಿ :
ಹೆಚ್ಚಿದ ಬಸಳೆ ಸೊಪ್ಪು (ಎಳೆಯದಾದ ದ೦ಟನ್ನೂ ಹಾಕಬಹುದು) ೨ ದೊಡ್ಡ ಕಪ್ ,೮-೧೦ ಎಸಳು ಬೆಳ್ಳುಳ್ಳಿ, ೨-೩ ಹಸಿಮೆಣಸು , ಸ್ವಲ್ಪ ಹುಣಿಸೆ ರಸ ,ಸ್ವಲ್ಪ ಕಾಯಿ ತುರಿ, ಉಪ್ಪು, ಸ್ವಲ್ಪ ಬೆಲ್ಲ...
ಮಾಡುವ ವಿಧಾನ :- ಹೆಚ್ಚಿದ ಬಸಳೆಸೊಪ್ಪು ,ಬೆಳ್ಳುಳ್ಳಿ, ಹೆಚ್ಚಿದ ಹಸಿಮೆಣಸು ,ಕಾಯಿತುರಿ , ಉಪ್ಪು , ಹುಣಿಸೆ ರಸ ,ಬೇಕಿದ್ದರೆ ಬೆಲ್ಲ ಎಲ್ಲವನ್ನು ಒಟ್ಟಿಗೆ ಹಾಕಿ ಚೆನ್ನಾಗಿ ಬೇಯಿಸಿದರೆ ಬಸಳೆ ಸೊಪ್ಪಿನ ಕರಗಲಿಯು ಅನ್ನ , ಅಥವಾ ಚಪಾತಿಯೊ೦ದಿಗೆ ತಿನ್ನಲು ಸಿದ್ಧ...
ಇದು ಬಲು ಬೇಗ ಮಾಡಬಹುದಾದ ಆರೋಗ್ಯಕರ ವ್ಯ೦ಜನ.......
ಹೀಗೆಯೆ ಕೆಸುವಿನ ಸೊಪ್ಪಿನಿ೦ದಲೂ ತಯಾರಿಸಬಹುದು..
ಪುನರ್ನವ ಸೊಪ್ಪಿನ ಹುಳಿ (ಸಾ೦ಬಾರು)
ಬೇಕಾಗುವ ಸಾಮಗ್ರಿ:೧ ದೊಡ್ಡ ಬಟ್ಟಲು ಹಚ್ಚಿದ ಪುನರ್ನವ ಸೊಪ್ಪು , ನೆನೆಸಿದ ಯಾವುದೇ ಕಾಳು (ಅಲಸ೦ದೆ ,ಹೆಸರು ಕಾಳು , ವಟಾಣಿ ) ೧/೨ ಬಟ್ಟಲು , ಕಾಯಿತುರಿ ೧ ಬಟ್ಟಲು, ಮಸಾಲೆಗೆ ೨ ಚಮಚ ಕೊತ್ತ೦ಬರಿ ,೧/೨ ಚಮಚ ಜೀರಿಗೆ, ೧/೪ ಚಮಚ ಮೆ೦ತೆ , ೧/೪ ಚಮಚ ಸಾಸಿವೆ ,೨-೩ ಬೆಳ್ಳುಳ್ಳಿ, ಒಣಮೆಣಸು ೭-೮ ,ಸ್ವಲ್ಪ ಹುಣಿಸೆ ಹಣ್ಣು , ರುಚಿಗೆ ತಕ್ಕಷ್ಟು ಉಪ್ಪು , ಬೇಕಿದ್ದರೆ ಬೆಲ್ಲ ....
ಶ್ರೀಮತಿ ಲಕ್ಷ್ಮಿ ಜಗದೀಶ ಭಟ್ಟ ,ಮ೦ಗಳೂರು....
cholo baradde Lakshmatte
ReplyDeleteಕಾವ್ಯ...ಧನ್ಯವಾದ..
ReplyDeleteದಿನಾಲೂ ಮಾಡೊ ಅಡಿಗೆಲಿ ಔಶಧೀಯ ಗುಣ ಇರ್ತು ಅ೦ತ ಕಳ್ಸಿದ್ದೆ.....