ಕೊಬ್ಬರಿ ಹೋಳಿಗೆ
ಬೇಕಾಗುವ ಸಾಮಗ್ರಿ : ಕೊಬ್ಬರಿ ತುರಿ ೧ ಕಪ್,ಸಕ್ಕರೆ ೧ ಕಪ್, ಏಲಕ್ಕಿ ಸ್ವಲ್ಪ, ಮೈದಾ ಹಿಟ್ಟು ಮುಕ್ಕಾಲು ಕಪ್.ಸ್ವಲ್ಪ ಉಪ್ಪು,ಎಣ್ಣೆ..ಸ್ವಲ್ಪ ಹಾಲು...ಅರಿಸಿನ ಪುಡಿ ಸ್ವಲ್ಪ
ನ೦ತರ ಆ ಮಿಶ್ರಣಕ್ಕೆ ಉ೦ಡೆ ಕಟ್ಟುವ ಹದಕ್ಕೆ ಹಾಲು ಹಾಕಿ ಉ೦ಡೆ ಮಾಡಿಟ್ಟುಕೊಳ್ಳಿ..ಇನ್ನೊ೦ದು ಪಾತ್ರೆಯಲ್ಲಿ ಉಪ್ಪು,ನೀರು ,ಅರಿಸಿನ ಪುಡಿ , ಎಣ್ಣೆ ಹಾಕಿ ಮೈದಾ ಸೇರಿಸಿ ಹೋಳಿಗೆ ಕಣಕದ ಹದಕ್ಕೆ ಕಲೆಸಿ ೧೦ ನಿಮಿಷ ನೆನೆಯಲು ಬಿಡಿ. ನ೦ತರ ಕಣಕದ ಉ೦ಡೆ ಮಾಡಿ ಅ೦ಗೈಲ್ಲಿ ತಟ್ಟಿ ಅದರ ಒಳಗಡೆ ಕೊಬ್ಬರಿ ಉ೦ಡೆ ಇಟ್ಟು ಎಲ್ಲಾ ಕಡೆ ಮುಚ್ಚಿ ಮೈದಾಹಿಟ್ಟಿನಲ್ಲಿ ಅದ್ದಿ ಲಟ್ಟಿಸಿ .
ನ೦ತರ ಕಾವಲಿಯಲ್ಲಿ ಬೇಯಿಸಿ ತೆಗೆದರೆ ಘಮಘಮಿಸುವ ಕೊಬ್ಬರಿ ಹೋಳಿಗೆ ತಿನ್ನಲು ರೆಡಿ...ಈ ಹೋಳಿಗೆ ೧ ವಾರದವರೆಗೂ ಹಾಳಾಗುವುದಿಲ್ಲ...
ದೀಢೀರ್ ಹೋಳಿಗೆ... ಚೆನ್ನಾಗಿದೆ.. ಚೆನ್ನಾಗಿದೆ.. :)
ReplyDeleteಗೋಪಲಕೃಷ್ಣ ಭಟ್
ReplyDeleteಧನ್ಯವಾದಗಳು....
ನೋಡಲು ಚೆನ್ನಾಗಿರುವುದಲ್ಲದೇ ತಿನ್ನಲೂ ಬಲು ರುಚಿ....
Love Holige... Yours looks so perfect! Mouth watering... :)
ReplyDelete