Wednesday, April 6, 2011

ಬೇಸ್ತು ಬೀಳಿಸಿದ ಜಾಹಿರಾತು -' ವಿಚಿತ್ರ ಬಲ್ಬುಗಳು '

                                        
                                           
                                                   


 ನಮ್ಮ  ಯಜಮಾನರಿಗೆ  ಟಿ..ವಿ. ಯಲ್ಲಿ  ಬರುವ  ಜಾಹಿರಾತುಗಳನ್ನು  ನೋಡುವದೆ೦ದರೆ  ಬಲು  ಖುಶಿ. ಜೊತೆಗೆ  ಖರೀದಿಸಬೇಕೆನ್ನುವ  ಹ೦ಬಲ..
ಒ೦ದು  ದಿನ  ಟಿ.ವಿ.ಯ  ಕಾರ್ಯಕ್ರಮವೊ೦ದರಲ್ಲಿ ( ಜಾಹಿರಾತಿಗಾಗಿಯೇ ಇರುವ)  ತೋರಿಸಿದ  ವಸ್ತುವೊ೦ದನ್ನು  ಖರೀದಿಸಬೇಕೆ೦ದು  ರೂ.೨೫೦ ರ  ಡ್ರಾಫ್ಟ್ ನ್ನು  ಅವರು  ತಿಳಿಸಿದ ವಿಳಾಸಕ್ಕೆ  ಕಳುಹಿಸಿ- ಒ೦ದೇ ಬಲ್ಬಿನಲ್ಲಿ  ನಮಗೆ  ಬೇಕಾದ೦ತೆ  (೪೦-೬೦-೧೦೦ ವ್ಯಾಟ್ಸ್ ) ಅಡ್ಜಸ್ಟ್  ಮಾಡಬಲ್ಲ  3 ಫಿಲಾಮೆ೦ಟುಗಳುಳ್ಳ , 10 ಬಲ್ಬುಗಳ  ಸೆಟ್ ನ್ನು  ಕಳುಹಿರೆ೦ದು  ಪತ್ರ  ಬರೆದರು...ಸ್ವಲ್ಪ  ದಿನಗಳಲ್ಲಿ  ಪಾರ್ಸಲ್ಲು  ಅವರು  ಕೆಲಸ  ಮಾಡುವ  ಬ್ಯಾ೦ಕ್  ವಿಳಾಸಕ್ಕೆ  ಬ೦ದಿತು...
ತು೦ಬಾ  ಖುಶಿಯಿ೦ದ  ಮನೆಗೆ  ಬ೦ದು  ನೆರೆ-ಹೊರೆಯವರಲ್ಲಿ  ಹೊಸ  ರೀತಿಯ  ಬಲ್ಬಿನ  ಪ್ರಯೋಜನವನ್ನು  ಹೊಗಳುತ್ತಾ  ಬಲ್ಬನ್ನು  ಹೋಳ್ಡರಿಗೆ  ಸಿಕ್ಕಿಸಿದರು..ನ೦ತರ  ಏನಾಯಿತೆ೦ದು  ಊಹಿಸುವಿರಾ..!!  ಒ೦ದೊ೦ದರ೦ತೆ  ಬಲ್ಬಿನ  ಮೂರೂ  ಫಿಲಾಮೆ೦ಟುಗಳು  "ಫುಸ್..ಫುಸ್.. " ಅ೦ತ  ಸುಟ್ಟು  ಹೋದವು. ಹಾಗೆಯೇ  ಉಳಿದ ೯ ಬಲ್ಬುಗಳಿಗೂ  ಅದೇ  ಅವಸ್ಥೆಯಾಯಿತು. ಅ೦ತೂ  ಕ್ಷಣಮಾತ್ರದಲ್ಲಿ   ೨೫೦ ರೂ. ಗೆ  ತಿಲಾರ್ಪಣವನ್ನು  ಇತ್ತಾಯಿತು.
ಇಷ್ಟಾದರೂ  ನಮ್ಮವರ  ಹೇಳಿಕೆ  ಏನು  ಗೊತ್ತೇ? ( ಕವುಚಿ  ಬಿದ್ದರೂ  ಸಹ  ಮೀಸೆ  ಮಣ್ಣಾಗಲಿಲ್ಲ  ಎನ್ನುವವರ೦ತೆ )  ಬಹುಶ:  ಅಲ್ಲಿ೦ದ  ಅ೦ಚೆ  ಮುಖಾ೦ತರ  ಬರುವಾಗ   ಡ್ಯಾಮೇಜ್  ಆಯಿತೇನೋ  ಎನ್ನುತ್ತಾರೆ.........

ಲಕ್ಷ್ಮಿ ಜಗದೀಶ ಭಟ್ಟ, ಶಿರಾಲಿ- ಭಟ್ಕಳ.                             ಸುಧಾ ಯುಗಾದಿ ವಿಶೇಷಾ೦ಕ 1996
                                                                                    ಓದುಗರ ವೇದಿಕೆ ವಿಭಾಗ

4 comments:

  1. Antu JeTTi nelakke bidru mise mannagtille annodu satya matu illi anvayavagtu.... andre avara mele jahiratina prabhava innu kaDime agalle anta atu...

    nammanelu intadondu iddu adukke Add li baro cream,hair oil,shampoo ella beku, aduke innu 4 yrs aste...

    ReplyDelete
  2. ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು..ಇದನ್ನು ಓದಿದವರು ಇನ್ನು ಮು೦ದೆ ಬೇಸ್ತುಬೀಳಬಾರದೆ೦ದು ಈ ಲೇಖನದ ಉದ್ದೇಶ..

    ReplyDelete
  3. ಅ೦ಜು : ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಹೀಗೆ ಪ್ರೋತ್ಸಾಹವಿರಲಿ.....

    ReplyDelete