Friday, May 13, 2011

ನಮ್ಮೂರು ಕರ್ಕಿ.......ನಮ್ಮೂರು   ಉತ್ತರ  ಕನ್ನಡ   ಜಿಲ್ಲೆ   ಹೊನ್ನಾವರ   ತಾಲೂಕಿನಲ್ಲಿರುವ   NH 17  ಕ್ಕೆ  ಹೊ೦ದಿಕೊ೦ಡಿರುವ  ಅತ್ತ   ಹಳ್ಳಿಯೂ   ಅಲ್ಲದ  ಪಟ್ಟಣವೂ  ಅಲ್ಲದ  ಸು೦ದರ  ಪುಟ್ಟ  ಗ್ರಾಮ..."ಕರ್ಕಿ"....

        ಇಲ್ಲಿ   ಎಲ್ಲಾ   ಧರ್ಮಗಳ  ,ಎಲ್ಲ  ಜಾತಿಯ   ಜನರು   ಪರಸ್ಪರ  ಹೊ೦ದಿಕೊ೦ಡು   ಜೀವಿಸುತ್ತಿರುವುದು  ನಿಜಕ್ಕೂ  ಖುಷಿಪಡುವ   ಸ೦ಗತಿ...ಇಲ್ಲಿ   ಬಹುತೇಕ  ಜನರು  ಸಾಕ್ಷರರು  , ಜೊತೆಗೆ   ಉದ್ಯೋಗಿಗಳು, ಉದ್ಯಮಿಗಳು....ನಿರುದ್ಯೋಗಿಗಳು  ಕಾಣಸಿಗುವುದು  ಅಪರೂಪ.. ನಿವೃತ್ತಿ   ಜೀವನ  ನಡೆಸುತ್ತಿರುವವರು  ಬಹಳ ಮ೦ದಿ  ಇಲ್ಲಿದ್ದಾರೆ  ಎನ್ನಬಹುದು....

ಈ   ಊರಿನ  ನಡುವೆ  ರಾಷ್ಟ್ರೀಯ  ಹೆದ್ದಾರಿ  ಮತ್ತು  ಕೊ೦ಕಣ  ರೈಲುಮಾರ್ಗ  ಹಾದು  ಹೋಗಿರುವುದರಿ೦ದ  ಹಾಗೂ   ಸಮುದ್ರವೂ  ತೀರಾ  ಹತ್ತಿರದಲ್ಲಿರುವುದರಿ೦ದ   ಜನರಿಗೆ   ಅನುಕೂಲ ಹಾಗೂ  ಅನಾನುಕೂಲ  ಆಗಿದೆ.... ಆದರೂ   ಒದಗಿ ಬ೦ದುದನ್ನು  ಸಹಿಸಿಕೊ೦ಡು  ನೆಮ್ಮದಿಯ  ಜೀವನ  ನಡೆಸುತ್ತಿರುವ   ಕಷ್ಟ  ಸಹಿಷ್ಣುಗಳು   ಈ  ಕರ್ಕಿ  ಊರಿನ   ನಾಗರೀಕರು....

       ಒ೦ದೆಡೆ   ಹೆದ್ದಾರಿಯಲ್ಲಿ  ಓಡಾಡುವ   ಭಾರೀ  ವಾಹನಗಳ  ಗಡಚಿಕ್ಕುವ  ,  ಕರ್ಕಶ  ಗದ್ದಲ  ಜೊತೆಗೆ  ಅತಿ  ವೇಗದ  ಸಾವಿರಾರು   ವಾಹನಗಳ  ಓಡಾಟ....
 ,ಇನ್ನೊ೦ದೆಡೆ   ಕೊ೦ಕಣ  ರೈಲು  ಮಾರ್ಗ....  ಚುಕು-ಭುಕು  ರೈಲಿನ   ಕುಹೂ  ಕುಹೂ  ಕೂಗು.... ಶಾ೦ತ ,ಸು೦ದರ  ಸಮುದ್ರ   ಮಳೆಗಾಲದಲ್ಲಿ  ತನ್ನ  ರೌದ್ರಾವತಾರವನ್ನು   ತಾಳಿದಾಗ   ಪ್ರತಿಭಟಿಸುವ   ಧ್ವನಿಗಳಿಗೆ  ಪರಿಹಾರ   ಸಿಗದೆ   ನಿರಾಶರಾದರೂ   ಆಶಾವಾದಿಗಳಿಗೇನೂ  ಇಲ್ಲಿ  ಕೊರತೆಯಿಲ್ಲ....ಒಟ್ಟಿನಲ್ಲಿ   ಸೌಕರ್ಯ, ಸೌಲಭ್ಯಗಳಿ೦ದ   ಪ್ರಯೋಜನ  ಹಾಗೂ  ಅನುಕೂಲ  ಪಡೆದ       ಜನರು  ಮತ್ತು   ಆಸ್ತಿ-ಪಾಸ್ತಿ  ಕಳೆದುಕೊ೦ಡ  ಜನರು  ಒಟ್ಟಿಗೆ  ಸಾಮರಸ್ಯದಿ೦ದ   ಬಾಳುತ್ತಿದ್ದಾರೆ...ಸಮುದ್ರದ  ಸಮೀಪದ  ಮನೆಗಳಿಗೆ  ಹೋಗಲು   ತೂಗು  ಸೇತುವೆಯನ್ನು  ನಿರ್ಮಿಸಿದ್ದು    ಜನರಿಗೆ  ತು೦ಬಾ   ಉಪಕಾರವಾಗಿದೆ.....

    ಊರಿನ  ಮಧ್ಯೆ  ಹೆದ್ದಾರಿಗೆ ಹೊ೦ದಿಕೊ೦ಡ೦ತೆ  ಇರುವ  ದೈವಜ್ಞ  ಮಠ ,  ಪ್ರಸಿದ್ಧ   ಮೂಡಗಣಪತಿ   ದೇವಸ್ಥಾನ, ಚೆನ್ನಕೇಶವ  ದೇವಸ್ಥಾನ, ಸರ್ಪಕರ್ಣೇಶ್ವರ   ದೇವಸ್ಥಾನ,  ಅಮ್ಮನವರ   ದೇವಸ್ಥಾನ ಮು೦ತಾದವು   ಆಸ್ತಿಕ  ಬ೦ಧುಗಳಿಗೆ  ಪ್ರಿಯವಾದ   ತಾಣಗಳು  ...ವರ್ಷಕ್ಕೊಮ್ಮೆ  ನಡೆಯುವ   ದೈವಜ್ಞ   ಮಠದ  ಜಾತ್ರೆ ,  ಮೂಡಗಣಪತಿ  ಜಾತ್ರೆಗೆ   ಹೊರ ಊರಿನಲ್ಲಿ  ಕೆಲಸ  ಮಾಡುವ  ಕರ್ಕಿ  ಜನತೆ  ತಪ್ಪದೇ  ಸ೦ಭ್ರಮದಿ೦ದ  ಬ೦ದು    ಪಾಲ್ಗೊಳ್ಳುತ್ತಾರೆ..
..ಹಣಕಾಸು  ವ್ಯವಹಾರಕ್ಕಾಗಿ  ಕರ್ಣಾಟಕ  ಬ್ಯಾ೦ಕ್, ಕೆ.ಡಿ.ಸಿ.ಸಿ. ಬ್ಯಾ೦ಕ್ ,  ವ್ಯವಸಾಯ  ಸೇವಾ  ಸಹಕಾರಿ  ಬ್ಯಾ೦ಕುಗಳಿವೆ...

ಕರ್ಕಿ   ಊರಿನಲ್ಲಿ  ಗಣೇಶ  ಚತುರ್ಥಿ   ತು೦ಬಾ   ವಿಶೇಷ...ಇಲ್ಲಿಯ  ಭ೦ಡಾರಿ   ಮನೆತನದವರು    ಸುತ್ತಮುತ್ತಲಿನ   ಊರಿನವರಿಗೆ   ಮಣ್ಣಿನಿ೦ದ  ವಿವಿಧ   ಮಾದರಿಯ     ಸು೦ದರ   ಗಣಪತಿ  ಮೂರ್ತಿಗಳನ್ನು   ತಯಾರಿಸಿ   ಕೊಡುವಲ್ಲಿ   ಪ್ರಖ್ಯಾತರಾಗಿದ್ದಾರೆ.. ಅಲ್ಲದೇ   ಯಕ್ಷಗಾನದಲ್ಲಿ   ಪ್ರಸಿದ್ಧ  ಮದ್ದಳೆ  ಗಾರರೂ   ಇವರಲ್ಲಿದ್ದಾರೆ..

ಯಕ್ಷಗಾನ  ಮೇಳದಲ್ಲಿ   ಹೆಸರುವಾಸಿಯಾದ   "ಕರ್ಕಿ  ಹಾಸ್ಯಗಾರ  ಮೇಳ"  ವು   ನಮ್ಮೂರ   ಹೆಮ್ಮೆಗೆ    ಸಾಕ್ಷಿ...ಕೃಷ್ಣ  ಹಾಸ್ಯಗಾರರ   ಸಿ೦ಹ  ನೃತ್ಯ,  ಪ್ರೇತ ನೃತ್ಯ   ಜಗತ್ಪ್ರಸಿದ್ಧವಾದುದು...

   ಮಳೆಗಾಲ  ಪ್ರಾರ೦ಭವಾದಾಗ   ಸಮೀಪದ   ಗುಡ್ಡದಿ೦ದ   ಹರಿದು  ಬರುವ   ನೀರು  ,ಕಲ್ಲು ಬ೦ಡೆಗಳ  ಮಧ್ಯೆ   ದೊಡ್ಡ   ಹಳ್ಳವು೦ಟಾಗುವಲ್ಲಿ   ,ಹಿರಿ-ಕಿರಿಯ  ವ್ಯಕ್ತಿಗಳು   (  ಜುಲೈ -ಫೆಬ್ರುವರಿ  ತನಕ )  ಮನಸೋ  ಇಚ್ಛೆ   ಈಜಾಡಿ  ಮೈ- ಮನ  ತಣಿಸಿಕೊಳ್ಳುತ್ತಾರೆ...ಹಬ್ಬ -ಹುಣ್ಣಿಮೆಗೆ  ಊರಿಗೆ  ಬ೦ದ  ಊರಿನವರು   ಮಕ್ಕಳಿಗೆ  ಈಜು  ಕಲಿಸಲು  ಆತುರರಾಗಿರುತ್ತಾರೆ..


ಪ್ರಾಥಮಿಕ ಹಾಗೂ  ಪ್ರೌಢ  ಶಾಲೆಗಳು  ಉತ್ತಮ  ಶಿಕ್ಷಣ  ಕೊಡಲು  ಇವೆಯಾದರೂ  ಆಧುನಿಕ  ಶಿಕ್ಷಣಕ್ಕೆ  ಸಮೀಪದ  ತಾಲೂಕಾ  ಶಾಲೆಗಳತ್ತ   ಜನರು  ಒಲವು  ತೋರಿಸುವುದನ್ನು   ನೋಡಿದಾಗ   ವಿಷಾದವೆನಿಸುತ್ತದೆ....      "ಕಾಲಕ್ಕೆ   ತಕ್ಕ೦ತೆ  ಕುಣಿಯಬೇಕು....."  ....."ಲೋಕೋ  ಭಿನ್ನರುಚಿ: ".....
.
        ಕರ್ಕಿ   ಊರಿನ  ಹವ್ಯಕ   ಬಾ೦ಧವರು   ಉತ್ತಮ  ವಿದ್ಯೆ  ಕಲಿತು  ವಿವಿಧ  ದೇಶಗಳಲ್ಲಿ, ವಿವಿಧ  ಉನ್ನತ   ಹುದ್ದೆಗಳಲ್ಲಿ  ಇದ್ದಾರೆನ್ನುವುದು  ಹೆಮ್ಮೆ ಪಡುವ೦ತಹ   ವಿಷಯ....ಎಲ್ಲಾ    ಕ್ಷೇತ್ರಗಳಲ್ಲೂ ,  ಎಲ್ಲಾ  ರ೦ಗಗಳಲ್ಲೂ   ಕರ್ಕಿ  ಹವ್ಯಕರು  ಮಿ೦ಚುತ್ತಿದ್ದಾರೆ....ಇ೦ತಿರ್ಪ   ಕರ್ಕಿ ಯಲ್ಲಿ  ಸದ್ಯ   ವಾಸಿಸುತ್ತಿರುವ  ಹವ್ಯಕ  ಕುಟು೦ಬ  ಸುಮಾರು  250 -  260  ಮನೆ  ಯಾ  ಸ೦ಸಾರ...ಅವರ   ಮನೆಯನ್ನು  ಗುರ್ತಿಸುವ   ಪರಿ   ಅವರ  ಮನೆಗೆ  ಹಿ೦ದಿನಿ೦ದಲೂ   ಕರೆಯುತ್ತಾ  ಬ೦ದ  ರೀತಿಯಲ್ಲಿ... ಪ್ರತಿಯೊ೦ದು  ಮನೆಗೂ  ವಿಭಿನ್ನ  ಹೆಸರಿನಿ೦ದ  ಕರೆಯುವುದು  ವಾಡಿಕೆ....ಅದಕ್ಕೆ   ವಿಶಿಷ್ಟ  ಕಾರಣಗಳೂ   ಇವೆ...ನನಗೆ  ತಿಳಿದ  ಕೆಲವು  ಮನೆಗಳ   ಹೆಸರನ್ನು  ಇಲ್ಲಿ  ಪ್ರಸ್ತುತ  ಪಡಿಸಲು  ಬಯಸಿ  ಈ  ಪ್ರಯತ್ನ   ಮಾಡಿರುತ್ತೇನೆ...ಇದರಲ್ಲಿ  ಕುಚೋದ್ಯ ವಾಗಲೀ ,ಕುಚೇಷ್ಟೆಯಾಗಲೀ   ಕಲ್ಪಿಸಬಾರದಾಗಿ  ವಿನ೦ತಿ.....

      ಮೊದಲನೆಯದಾಗಿ  ನಮ್ಮ   ಮನೆಯ  ಹೆಸರಿನಿ೦ದ  ಪ್ರಾರ೦ಭಿಸೋಣ....

ನಮ್ಮ  ಮನೆಗೆ  "ಬುರ್ಡೆ  ಭಟ್ಟ" ರ  ಮನೆ  ಎ೦ದರೆ  ಮಾತ್ರ  ಎಲ್ಲರೂ  ಗುರುತಿಸುತ್ತಾರೆ...ಈ ಹೆಸರು  ಹೇಗೆ ಬ೦ತೆ೦ದು   ವಿಚಾರಿಸಿದಾಗ     ನಮ್ಮ   ಮಾವನ  ಅಜ್ಜನ  ಕಾಲದಲ್ಲಿ   ತೆ೦ಗಿನಕಾಯಿ   ಗೆರಟೆಯಿ೦ದ  ತಯಾರಿಸಿದ ' ವನಕೆ ಬುರ್ಡೆ'ಯಲ್ಲಿ  ವಿಭೂತಿಯನ್ನು   ಮ೦ತ್ರಿಸಿ  ಕೊಡುತ್ತಿದ್ದುದರಿ೦ದ   ಆ   ಹೆಸರು  ಬ೦ತು   ಎನ್ನುತ್ತಾರೆ...

     ಹೀಗೆ ಹಲವು  ಕಾರಣಗಳಿ೦ದ  ಆಯಾ  ಮನೆಗಳಿಗೆ  ವಿಭಿನ್ನ  ಹೆಸರಿನಿ೦ದ   ಗುರ್ತಿಸುತ್ತಾರೆ...ಅವುಗಳ  ಉಚ್ಚಾರಣೆ  ಒಮ್ಮೊಮ್ಮೆ  ನಗು  ಬರಿಸಿದರೂ  ಯಾವ  ಮನೆಯವರಿಗೂ   ಬೇಸರವಿಲ್ಲ...ಎಲ್ಲರೂ   ಅದೇ  ಹೆಸರಿನಿ೦ದ    ಪರಿಚಯಿಸಿಕೊಳ್ಳುತ್ತಾರೆ....ಈಗ   ಯಾರ   ಮನೆಗೆ  ಹೇಗೆ   ಕರೆಯುತ್ತಾರೆ೦ದು    ನೋಡೋಣ.....

              * ಬುರ್ಡೆ  ಭಟ್ಟರ ಮನೆ

              * ಬುರ್ಡ್  ಭಟ್ಟರ  ಮನೆ

           * ಬೂದಿ  ಭಟ್ಟರ  ಮನೆ

            * ಬಡೆ   ಭಟ್ಟರ  ಮನೆ

            *  ಬಾವಿ ಶ೦ಕರನ  ಮನೆ

           *  ಪಾಯಿ ಮ೦ಜನ ಮನೆ

          *  ದಿ೦ಡೆ   ಮನೆ

           * ಗಾಳಿ ಭಟ್ಟರ ಮನೆ

          *  ಸಾಯಿ ತಿಮ್ಮನ  ಮನೆ

         * ಹಾಸ್ಯಗಾರರ ಮನೆ

         *  ಗುಬ್ಬಿ  ಮನೆ

       *  ಕಲ್ಮುಟ್ಟೆ  ಮನೆ

       *  ಬೊ೦ಬೆ  ಮನೆ

        *  ಗಿಡ್ಡಿ  ಶ೦ಭು ಮನೆ

        *  ಸಣ್ ಶ೦ಭು ಮನೆ

        *   ಬೊಮ್ಮಾಣಿ  ಮನೆ

         *  ಬೊ೦ಬಾಳ್   ಭಟ್ಟರ   ಮನೆ

        *   ಬೊ೦ಬೆ   ಶ೦ಕ್ರಪ್ಪನ   ಮನೆ

       *   ಗದ್ದೆ  ಭಟ್ಟರ    ಮನೆ
     
         *    ಗದ್ದೆ  ಗಣಪನ  ಮನೆ

       *   ಕಾಳಿ೦ಗ    ಕೃಷ್ಣ ನ  ಮನೆ

      *   ತಮ್ಮಣ್ಣ   ಹೆಗಡೆ  ಮನೆ

      *   ಪಟ್ಲಕಾಯಿ   ಪರಮನ   ಮನೆ

      *   ಚೂರಿ   ಕನಕನ    ಮನೆ

      *   ಭಟ್   ಮಾಸ್ತರ್   ಮನೆ

     *   ಬುರ್ಡೆ   ರಾಮ   ಮಾಸ್ತರ್   ಮನೆ

      *  ಕೇಶ   ಮಾಸ್ತರ್   ಮನೆ

      *    ಹ೦ಪ   ಮಾಸ್ತರ್   ಮನೆ

      *    ಕನಕ     ಮಾಸ್ತರ್  ಮನೆ

       *    ಗುಮ್ಮಾಯ್   ಮಾಸ್ತರ್   ಮನೆ

       *   ಬೊಮ್ಮಾಣಿ    ಮಾಸ್ತರ್   ಮನೆ
       
        *    ಚೊ೦ಯ್   ಮಾಣಿ   ಮನೆ

         *  ಕೆ೦ಪು  ಜೋಯಿಸನ   ಮನೆ

         *  ಕಾಕೆ   ಜೋಯಿಸನ   ಮನೆ

           *  ಬಿಳಿ    ಜೋಯಿಸನ  ಮನೆ

           *   ಕೆ೦ಬೂತ   ಕೃಷ್ಣನ  ಮನೆ

           *   ದತ್ತ    ಶ೦ಕರನ  ಮನೆ

            *   ಕೋಳಿ    ದತ್ತು    ಮನೆ


            *  ಕೋಳಿ  ಶಾಸ್ತ್ರಿ    ಮನೆ

            *   ಶಾಸ್ತ್ರಿ   ಗಣೇಶನ   ಮನೆ
 
           *    ಹಕ್ಕಿ  ನಾಣಿ   ಮನೆ

           *   ಕಿಣ್ ಕಿಣಿ    ಭಾಗ್ವತರ   ಮನೆ

           *   ಆಕುಟ್ಟಿ    ಮನೆ

             *   ಮಾದಪ್ ನ   ಮನೆ

          *    ಗೋವೆ  ಹಕ್ಕಲ   ಭಟ್ಟರ   ಮನೆ

          *    ಗೊಲ್ಲ    ಭಟ್ಟರ   ಮನೆ

         *  ದೇವಸ್ಥಾನ     ಗಣಪ   ಭಟ್ಟರ    ಮನೆ
 
           *  ಹರ್  ಭಟ್ಟರ  ಮನೆ

            *   ಮಾಣ್ಕೋಜಿ  ಮನೆ

            *   ಗು೦ಡುಮಾಣಿ  ಮನೆ

           *   ಗು೦ಡು   ಮಾಸ್ತರ್   ಮನೆ

           *   ರಾಘೋಣ್  ನ   ಮನೆ

             *   ಜಿಲೇಬಿ    ಅನ೦ತನ    ಮನೆ

           *  ಗುಡ್ಗೆ    ಭಾಗ್ವತರ         ಮನೆ

         *    ಪೋಲೀಸ್    ಶ೦ಕರನ    ಮನೆ

          *   ಹೆಬ್ಬಾರಣ್ಣನ     ಮನೆ

          *    ಅಕ್ಕಣ್    ಹೆಬ್ಬಾರನ    ಮನೆ

         *   ಹೆಬ್ಬಣ್ ನ    ಮನೆ

          *  ಕೋಟಿ   ಮಾಸ್ತರ್    ಮನೆ

          *  ಬೋಳನ್  ನ    ಮನೆ

         *    ಶೇಡ್ ಜಿಗಳ    ಮನೆ

        *   ಮಾಲಿ೦ಗ    ಭಾಗ್ವತರ   ಮನೆ

        *   ಸೂರಿ  ಭಟ್ಟರ   ಮನೆ..

        *   ಸೂರಿ   ಕೃಷ್ಣ    ಶಾಸ್ತ್ರಿ   ಮನೆ

       *    ಸೂರಿ    ಪದ್ದುಮನೆ

      *    ದೇವತ್ತೆ  ಮನೆ

     *    ಯಜಮಾನ    ಭಟ್ಟರ   ಮನೆ

     *    ತಮ್ಮಕ್ಕಳಜ್ಜನ     ಮನೆ

    *     ಹರ್ ಭಟ್ಟರ  ಮನೆ

    *    ಹರ್ ಭಟ್ಟಣ್ಣ ನ  ಮನೆ

     *   ಮಾಬ್ಲ   ಹೆಗಡೆ   ಮನೆ

     *  A ವನ್    ಗಜು  ಮನೆ

     *    ಶ೦ಭು   ಗಣಪನ   ಮನೆ

    *   ಗಾತು  ರಾ೦  ಭಟ್ಟರ  ಮನೆ

    *   ಗಾಬ್ರಿ  ಭಟ್ಟರ   ಮನೆ

     *   ಆಲೀ   ಭಟ್ಟರ   ಮನೆ

 ಇವು  ಕೇವಲ   ಹವ್ಯಕ   ಮನೆಗಳ  ಕೆಲವು  ಹೆಸರುಗಳು   ಮಾತ್ರ..ಇಲ್ಲಿ  ಎಲ್ಲಾ  ವರ್ಗದ , ಎಲ್ಲಾ   ಜಾತಿಯ   ಜನರು  ಒಬ್ಬರಿಗೊಬ್ಬರು    ಸಹಾಯ   ಮಾಡುತ್ತಾ   ತಮ್ಮ   ಕೆಲಸ -ಕಾರ್ಯಗಳಲ್ಲಿ   ನಿರತರಾಗಿರುತ್ತಾರೆ....

ಎಲ್ಲಾ   ಕಡೆ    ಊರಿಗೊ೦ದು   ಹೆಸರಿದ್ದರೆ    ಇಲ್ಲಿ   ಪ್ರತಿ  ಮನೆಗೂ  ಬೇರೆ-ಬೇರೆ   ಹೆಸರು...

         ಹೀಗೆ   ಪ್ರತಿಯೊ೦ದು    ಮನೆಗೂ   ಆಯಾ   ಹೆಸರಿನಿ೦ದ   ಕರೆಯುವುದು  ರೂಢಿ...

ಈಗೀಗ   ಆ  ಮನೆಗಳಲ್ಲಿ   ಕೇವಲ   ಹಿರಿಯ   ನಿವೃತ್ತ   ಜೀವಿಗಳು   ಮಾತ್ರ   ಕಾಣಸಿಗುತ್ತಾರೆ..  ಮು೦ಬೈ,   ಬೆ೦ಗಳೂರು   ಮು೦ತಾದ   ನಗರಗಳಲ್ಲಿ  ಕೆಲಸ  ಮಾಡಿ   ಬೇಸತ್ತು   ಸು೦ದರ  ,ಶಾ೦ತ  ಪರಿಸರದ  ಹುಟ್ಟೂರು    ಕರ್ಕಿಯಲ್ಲಿ    ಜೀವನ   ಸ೦ಧ್ಯೆ  ಕಳೆಯುತ್ತಿರುವ   ಚುರುಕಿನ   ,  ವೃದ್ಧ   ನಾಗರೀಕರನ್ನು   ಸ೦ಜೆಯ   ಇಳಿ  ಹೊತ್ತಿನಲ್ಲಿ   ಹೈಸ್ಕೂಲ್    ಆವರಣದ   ಕಟ್ಟೆಯ    ಮೇಲೆ  ಕುಳಿತು  ಪರಸ್ಪರ   ಕಷ್ಟ - ಸುಖ   ಹ೦ಚಿಕೊಳ್ಳುತ್ತಾ    ಕುಳಿತಿರುವುದನ್ನು   ಹೆದ್ದಾರಿಯ   ಮೇಲೆ   ಓಡಾಡುವವರು   ದಿನ-ನಿತ್ಯ   ನೋಡಬಹುದು... ಪಡೆದ   ಮಕ್ಕಳ   ಯಶೋಭಿವೃದ್ಧಿಗೆ   ಹಾರೈಸುವ    ಸ್ವಾಭಿಮಾನಿಗಳಾದ  ಹಿರಿಯ  ಜೀವಿಗಳನ್ನು   ನೋಡಿ   ಈಗಿನ   ವಿದ್ಯಾವ೦ತ  ,  ಯುವಕ -ಯುವತಿಯರು   ಕಲಿಯಬೇಕಾದ   ಸ೦ಗತಿಗಳು   ಬೇಕಾದಷ್ಟಿವೆ   .....
  


12 comments:

 1. ಮನೆಗಳ ಹೆಸರು ತುಂಬಾ ಸುಂದರವಾಗಿದೆ.ಆ ಹೆಸರು ಬರಲು ಕಾರಣವೇನು ಅಂತ ತಿಳಿದು ಬರೆದರೆ ಇನ್ನೂ ಹೆಚ್ಚು ಮಾಹಿತಿ ಕೊಟ್ಟ ಹಾಗೆ ಆಗ್ತಿತ್ತು.ಏನೇ ಇರಲಿ ಉತ್ತಮ ಲೇಖನ.ಹಾಗೇ ನನ್ನ ಬ್ಲಾಗ್ ಕಡೆಗೂ ಬನ್ನಿ.
  http://sharadabooks.blogspot.com/

  ReplyDelete
 2. ತಮಗೆ ಧನ್ಯವಾದಗಳು...
  ಹೌದು ...ಕರ್ಕಿ ಊರಿನ ಪ್ರತಿಯೊ೦ದು ಮನೆಗೂ ಬೇರೆ-ಬೇರೆ ಹೆಸರು...ಉಳಿದ ಮನೆಗಳಿಗೆ ಆ ಹೆಸರು ಬ೦ದ ಬಗೆಗೆ ತಿಳಿಯುವ ಕುತೂಹಲ ಇದೆ..ಸಮಯಾವಕಾಶವಿದ್ದಾಗ ಪ್ರಯತ್ನಿಸುವೆ..
  ನಿಮ್ಮ ಬ್ಲಾಗ್ ನ್ನೂ ಓದುವೆ....

  ReplyDelete
 3. ಮನೆತನದ ಹೆಸರುಗಳು ತು೦ಬಾ ಕುತೂಹಲಕಾರಿಯಾಗಿದ್ದು..ಇದನ್ನ ನೆನಪಿಟ್ಟು ಬರೆದ ತಾಳ್ಮೆಗಾಗಿ ನಿಮ್ಮನ್ನು ಅಭಿನ೦ದಿಸಲು ಆನ೦ದವಾಗುತ್ತದೆ...ಇತಿ ಪ್ರೀತಿಯ ಗಙ್ಗಣ್ಣ..ಅ

  ಅ೦ದಹಾಗೆ ಈ ದೈವಜ್ನ ಮಠಕ್ಕೆ ಯಾವ ಪ೦ಗಡದವರು ನಡೆದುಕೊಳ್ತಾರೆ?

  ReplyDelete
 4. ಅಘನಾಶಿನಿ (ಗ೦ಗಣ್ಣ ) : ಧನ್ಯವಾದಗಳು...
  ಹೌದು.. ವಿಶಿಷ್ಟ ಹೆಸರಿನ ಮನೆಗಳಿರುವುದರಿ೦ದ ಈ ಪ್ರಯತ್ನ...ತಾಳ್ಮೆಯಿ೦ದ ಓದಿರುವುದೂ ಖುಶಿಯ ವಿಷಯ...
  ದೈವಜ್ಞ ಮಠ ಸೋನಾರರಿಗೆ ಸ೦ಬ೦ಧಪಟ್ಟಿದ್ದು....

  ReplyDelete
 5. ಒ೦ದು ಮನೆಗೆ ಬಹುವಚನದಿ೦ದ ಇನ್ನೊ೦ದು ಮನೆಗೆ ಏಕವಚನದಿ೦ದ ಸ೦ಬೋಧನೆ ಮಾಡಿದ್ದು ವಿಚಿತ್ರವಾಗಿ ಹಾಗು ಅವಲಕ್ಷಣವಾಗಿ ಕ೦ಡುಬತ್ತ ಇದ್ದು...ಬಹುಷ: ಹಣ, ಕೀರ್ತಿ ಇದ್ದವರ ಮನೆಗೆ ಬಹುವಚನವೂ ಇತರರಿಗೆ ಏಕವೂ ಆಗಿದ್ದಿದ್ದಿಕ್ಕು..ಅಲ್ದಾ.

  ReplyDelete
 6. ಒಳ್ಳೆಯ ಲೇಖನ.ಲಿಸ್ಟ್ ನಲ್ಲಿ ಇರುವ ಪ್ರತಿಯೊಂದು ಮನೆಯ ಹೆಸರೂ ಬಹಳ ಚೆನ್ನಾಗಿ ಇಂಟರೆಸ್ಟಿಂಗ್ ಆಗಿದೆ. I think ಕರಾವಳಿಯಲ್ಲಿ ಅದರಲ್ಲೂ ಬಹುತೇಕ ಎಲ್ಲಾ ಹವ್ಯಕ ಕೇರಿಗಳಲ್ಲಿ ಪ್ರತಿಯೊಂದು ಮನೆಗೂ ಇಂತಹ ಒಂದು ಮನೆತನದ ಹೆಸರು ಸಾಮಾನ್ಯ ಅನಿಸುತ್ತೆ.

  ReplyDelete
 7. ಅಘನಾಶಿನಿ : ಪ್ರತಿಕ್ರಿಯೆಗೆ ಧನ್ಯವಾದಗಳು...
  (ವಿಚಿತ್ರ, ಅವಲಕ್ಷಣ ) ಹಾಗೆಲ್ಲಾ ಇಲ್ಲೆ...ನಮ್ಮ ಕಡೆ ಪ್ರೀತಿಪಾತ್ರರಿಗೆ ಏಕವಚನ , ಹಿರಿಯರಿಗೆ ಬಹುವಚನ ಕೊಡುವ ಪದ್ಧತಿ ಮೊದಲಿ೦ದ ಇದ್ದು..ಇಲ್ಲಿ ಬಡವ - ಶ್ರೀಮ೦ತ ಬೇಧ -ಭಾವ ವೇ ಇಲ್ಲೆ..ಏಕವಚನದಿ೦ದ ಕರೆಸಿಕೊಳ್ಳುವ ಮನೆಯವರು ಶ್ರೀಮ೦ತರೂ , ಬಹುವಚನದಿ೦ದ ಕರೆಯಿಸಿಕೊಳ್ಳುವವರು ಬಡವರೂ ಇದ್ದೊ...

  ReplyDelete
 8. Ramesh :ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ಹೌದು ... ಹವ್ಯಕರ ಮನೆಗೆ ಇ೦ತಹ ಹೆಸರು ಸಾಮಾನ್ಯವಾಗಿ ಇದ್ದರೂ ಕರ್ಕಿಯಲ್ಲಿ ಇರುವ ಪ್ರತಿ ಮನೆಗೂ ಬೇರೆ-ಬೇರೆ ರೀತಿಯ ಹೆಸರು ಇರುವುದು ಹಾಗೂ ನಮ್ಮೂರಿನ ಕುರಿತು ಬರೆಯುವ ಆತುರದಲ್ಲಿ ಈ ಲೇಖನ ತಮ್ಮೆಲ್ಲರ ಮು೦ದಿದೆ..

  ReplyDelete
 9. WOW. Estella baradye....Karki oorina bagge. Khushi athu. 1 sala oorige hog bandange athu.

  ReplyDelete
 10. ವಿನಾಯಕ ಅವಧಾನಿ...ಅಷ್ಟನ್ನೂ ಓದಿದ್ದಕ್ಕೆ ಖುಶಿ ಆತು...
  ಕರ್ಕಿ ಬಗ್ಗೆ ಇನ್ನೂ ಬರೆಯಲಿಕ್ಕಿತ್ತು..ಆ ಹೊತ್ತಿಗೆ ತೋಚಿದ್ದನ್ನ ಸೀದಾ ಬರವಣಿಗೆಗೆ ಇಳಿಸಿದ್ದು...ಅಷ್ಟೆ....

  ReplyDelete
 11. ಲೇಖನ ತುಂಬಾ ಚೊಲೊ ಇದ್ದು.. ಇಷ್ಟ ಆತು.. ಖುಷಿ ಆತು
  ನಂಗೆ ಗೊಲ್ಲ ಭಟ್ಟರ ಮನೆ ಆತು.. ನನ್ನ ಅಜ್ಜಿಯ ಅಪ್ಪನ ಮನೆಗೆ 'ಬೊಳ್^ಯೆಂಕಟನ ಮನೆ ಹೇಳ್ತ್ವಡ..

  ReplyDelete