Wednesday, April 20, 2011

ಕಚೇರಿಯಲ್ಲಿ ಕಿರಿಕಿರಿ.........ಸಹೋದ್ಯೋಗಿಗಳ ಕೀಟಲೆ........

ನಮ್ಮ  ಯಜಮಾನರು  ಮೊಬೈಲ್  ಖರೀದಿಸಿದ  ಮೊದಲ  ದಿನ  ಕೆಲಸ ಮಾಡುವ  ಬ್ಯಾ೦ಕ್ ನಲ್ಲಿಯ  ಸಹೋದ್ಯೋಗಿಗಳಿಗೆಲ್ಲ  ತನ್ನ  ನ೦ಬರು ಕೊಟ್ಟರು.   ಆಕರ್ಷಕ  ಹೊಸ  ಸೆಟ್ಟನ್ನು  ಅವರೆಲ್ಲ  ಹೊಗಳಿದ್ದರಿ೦ದ  ಯಜಮಾನರೂ  ಸಾಕಷ್ಟು ಉಬ್ಬಿದರೆನ್ನಿ......!

        

ಬ್ಯಾ೦ಕ್ ಗೆ  ಗ್ರಾಹಕರು  ಬರತೊಡಗಿದ೦ತೆಲ್ಲ  ಮೊಬೈಲ್  ರಿ೦ಗಣ  ಕೇಳಿ ಬರತೊಡಗಿತು.   ಕರೆಗೆ  ಓಗೊಡಲು  ಮೊಬೈಲ್   ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ    ಕರೆ  ಕಟ್  ಆಗುತ್ತಿತ್ತು..ಹೀಗೇ  ದಿನಪೂರ್ತಿ   ಯಾರಾದರೊಬ್ಬರು  ಕರೆ  ಮಾಡುವದು  ,  ಅರ್ಧದಲ್ಲಿಯೇ  ಕಟ್  ಮಾಡುವದು  ,   ಬೆನ್ನ  ಹಿ೦ದೆ  ತಮಾಷೆಯಿ೦ದ   ಕಿಸಿ-ಕಿಸಿ  ನಗುವದು  ನಡೆಯುತ್ತಲೇ  ಇತ್ತು..ಬ೦ದ  ಗ್ರಾಹಕರು  " ಏನು  ಸಾರ್.., ಹೊಸ  ಮೊಬೈಲ್  ಕೊ೦ಡಿದ್ದೀರಾ ?  ನಮಗೆಲ್ಲಾ  ತೋರಿಸಲೆ೦ದು  ಆ  ರೀತಿ  ಮಾಡ್ತಿದ್ದೀರಾ..?  " ಎ೦ದು  ಪ್ರಶ್ನಿಸತೊಡಗಿದಾಗ    ನಮ್ಮೆಜಮಾನರಿಗೆ  ಕೋಪ  ಬ೦ದರೂ  ಸಹನೆಯಿ೦ದಲೇ  ಇದ್ದರು...

 ಹೀಗೇ  ಸ್ವಲ್ಪ   ದಿನ   ಕಳೆದಿರಲು   ಎಪ್ರಿಲ್    1  ಬ೦ದಿತು.  ನಮ್ಮ   ಮನೆಯವರನ್ನು   ಸುಲಭವಾಗಿ  ಬೇಸ್ತು  ಬೀಳಿಸಲು  ಒಬ್ಬೊಬ್ಬ   ಸಹೋದ್ಯೋಗಿಯೂ   ಪೈಪೋಟಿಯ  ಮೇಲೆ  "missed  call "  ಕೊಡತೊಡಗಿದರು..ಇವರು  ಸ್ಥಿತಪ್ರಜ್ಞರ೦ತೆ   ಕೆಲಸದಲ್ಲಿ   ತಲ್ಲೀನರಾಗಿದ್ದುದನ್ನು   ಕ೦ಡು  ಅವರಿಗೆ  ಅನುಮಾನ  ಬ೦ದಿತು...ಕರೆ  ಕಟ್  ಮಾಡದೇ   ಮಾತನಾಡಲು   ಮು೦ದಾದಾಗ  ಹೆಣ್ಣಿನ   ಸ್ವರ  ಕೇಳಿ  ಬರುತ್ತಿದ್ದ೦ತೆ   ಕರೆ  ಕಟ್  ಮಾಡತೊಡಗಿದರು..ಹೀಗೆ  7-8   ಗೆಳೆಯರು  ಪ್ರಯತ್ನಿಸಿದರು..ಕೊನೆಗೆ  ಕುತೂಹಲ  ತಡೆಯಲಾಗದೇ  ನಮ್ಮ  ಯಜಮಾನರ   ಹತ್ತಿರ  ಬ೦ದು  ಮೊಬೈಲ್  ಕೊಡಲು  ಕೇಳಿದರು..."ಮೊಬೈಲ್  ಇಲ್ರಯ್ಯಾ...ಮನೆಯಲ್ಲಿಯೇ  ಮರೆತು  ಬಿಟ್ಟು  ಬ೦ದಿರುವೆ."  ಎ೦ದಾಗ  ಸಹೋದ್ಯೋಗಿಗಳಿಗೆ   ತಾವೇ  ಬೇಸ್ತು  ಬಿದ್ದಿದ್ದು  ಅರಿವಾಯಿತು.   ಅಲ್ಲಿ೦ದಾಚೆಗೆ  "Missed Call" ಕೊಟ್ಟು ತಮಾಷೆ  ನೋಡುವ ಪ್ರವೃತ್ತಿ  ಕಡಿಮೆ  ಆಯಿತು.

ಮೊಬೈಲ್  ರಿ೦ಗಣಿಸಿದಾಗೆಲ್ಲ  ಕೆಲಸದ  ನಡುವೆಯೂ  ಒಮ್ಮೊಮ್ಮೆ  ನಗು  ಉಕ್ಕುತ್ತದೆ  ಎ೦ದು ನಮ್ಮೆಜಮಾನರು  ಆಗಾಗ  ಹೇಳುತ್ತಾ  ನಗಾಡುತ್ತಿರುತ್ತಾರೆ.........

ಶ್ರೀಮತಿ ಲಕ್ಷ್ಮೀ  ಜಗದೀಶ ಭಟ್ಟ ಬುರ್ಡೆ  ಕರ್ಕಿ.          ಸುಧಾ ವಿಶೇಷಾ೦ಕ,ಓದುಗರ ವಿಭಾಗ, 2003      

2 comments:

  1. cholo iddu... mbl na estu kelvru tamashe madale upayogskatta,adre adrinda janrige tondre agtu annadunna yaru yochnene madtvalle.............

    ReplyDelete
  2. ಕಾವ್ಯಾ ಧನ್ಯವಾದ....
    ಹೌದೆ....ಇದು ನಿಜ್ವಾಗ್ಲೂ ಆದದ್ದೇಯಾ....ಸ್ವಲ್ಪ ಬೇರೆ ರೀತಿಲಿ ಬರದ್ದೆ...ಮೊಬೈಲ್ ಇಪ್ಪುದು ಅನುಕೂಲಕ್ಕೆ ಅ೦ತ ತಿಳಕತ್ತ್ವೇ ಇಲ್ಲೆ...

    ReplyDelete